ದೇವೇಗೌಡರನ್ನು ಹೊಗಳುವ ಭರದಲ್ಲಿ ತೆಗಳಿದ ಜೆಡಿಎಸ್ ಶಾಸಕ

‘ಮಾಜಿ ಪ್ರಧಾನಿಗಳಿಗೆ ಸರ್ಕಾರ ಇರೋದಕ್ಕೆ ಬಂಗಲೆ ಕೊಡುತ್ತದೆ. ಅವರ ವಂಶಕ್ಕೆ ಆಗುವಷ್ಟು ಎಲ್ಲವನ್ನೂ ಸರ್ಕಾರ ಕೊಡುತ್ತದೆ. ಬಿಳಿ ಆನೆ ಥರ ತಿಂದು ಮನೆಯಲ್ಲಿ ಬಿದ್ದುಕೊಳ್ಳುತ್ತಾರೆ. ಆದರೆ ದೇವೇಗೌಡರು ಮಾತ್ರ ಈಗಲೂ ಹುಚ್ಚು ನಾಯಿ ಥರಾ ತಿರುಗುತ್ತಾರೆ. ಇವರು ಮಾತ್ರ ಜನಸಾಮಾನ್ಯರಿಗೆ ಸಿಗುತ್ತಾರೆ. ಬೇರೆಯವರು ಸಿಗುತ್ತಾರಾ?’ ಎಂದು ಪ್ರಶ್ನಿಸಿದರು.
'ಎಚ್.ಡಿ.ದೇವೇಗೌಡ ಅವರು ಈ ಇಳಿ ವಯಸ್ಸಿನಲ್ಲೂ ಹುಚ್ಚು ನಾಯಿಯಂತೆ ತಿರುಗುತ್ತಾರೆ’ ಎಂದು ಪಟ್ಟಣದಲ್ಲಿ ಸೋಮವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತಿನ ಭರದಲ್ಲಿ ಹೇಳಿದರು. ‘ನಾನು, ಶಾಸಕ ಸುಧಾಕರ್‌ಲಾಲ್ ಕ್ಷೇತ್ರದಲ್ಲಿ ಹುಚ್ಚುನಾಯಿಗಳಂತೆ ತಿರುಗುತ್ತೇವೆ. ಕಳೆದ ಸಲ ಸೋತಿದ್ದ ಕಾಂಗ್ರೆಸ್ ನಾಯಕರು (ಡಾ.ಜಿ.ಪರಮೇಶ್ವರ್) ವೈಟ್ ಕಾಲರ್ ರಾಜಕಾರಣಿ. ಅವರು ಜನ ಸಾಮಾನ್ಯರ ಕೈಗೆ ಸಿಗುವುದಿಲ್ಲ’ ಎಂದು ಟೀಕಿಸಿದರು.
Comments