ಬಿಜೆಪಿಯ ನಾಲ್ವರು ಸದಸ್ಯರು ಜೆಡಿಎಸ್ ಗೆ ಸೇರ್ಪಡೆ



ವಿಧಾನಸಭೆ ಚುನಾವಣೆ ಎದುರಾಗುತ್ತಿರುವಾಗ ಸೊರಬ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ನಾಲ್ವರು ತಾಲೂಕು ಪಂಚಾಯಿತಿ ಸದಸ್ಯರು ಜೆಡಿಎಸ್ ಸೇರಿದ್ದು, ಶಾಸಕ ಮಧು ಬಂಗಾರಪ್ಪ ಅವರ ಬಲ ಹೆಚ್ಚಿದೆ.
ವಿಜಯ ಕುಮಾರ್, ಬಂಗಾರ ಗೌಡ, ಮೀನಾಕ್ಷಿ ನಿರಂಜನಮೂರ್ತಿ, ಕಮಲಾ ಕುಮಾರ್ ಬಿಜೆಪಿ ತೊರೆದು ಮಧು ಬಂಗಾರಪ್ಪ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದಾರೆ. ಸೊರಬ ತಾಲೂಕು ಪಂಚಾಯಿತಿಯಲ್ಲಿ ಸದ್ಯ ಬಿಜೆಪಿ ಸದಸ್ಯರ ಸಂಖ್ಯೆ ಕೇವಲ 1.ಸೊರಬ ತಾಲೂಕು ಪಂಚಾಯಿತಿ ಸದಸ್ಯ ಬಲ 19. 2016ರಲ್ಲಿ ಚುನಾವಣೆ ನಡೆದಾಗ ಜೆಡಿಎಸ್ 11, ಬಿಜೆಪಿ 5, ಕಾಂಗ್ರೆಸ್ 3ಸ್ಥಾನ ಪಡೆದುಕೊಂಡಿದ್ದವು. ಈಗ ಬಿಜೆಪಿಯ ನಾಲ್ವರು ಸದಸ್ಯರು ಜೆಡಿಎಸ್ ಸೇರಿದ್ದು, ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.ಸದ್ಯ, ಸೊರಬ ಕ್ಷೇತ್ರ ಜೆಡಿಎಸ್ ವಶದಲ್ಲಿದೆ. ಮಧು ಬಂಗಾರಪ್ಪ ಕ್ಷೇತ್ರದ ಶಾಸಕರು. ಜಿಲ್ಲೆಯ ತುಂಬಾ ಸಂಚಾರ ನಡೆಸುತ್ತಿರುವ ಅವರು ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಜಯಗಳಿಸಬೇಕು ಎಂದು ಶ್ರಮಿಸುತ್ತಿದ್ದಾರೆ.
Comments