ನನಗೆ ಗೆಲ್ಲುವ ಮಾನದಂಡ ಮುಖ್ಯ, 'ಒಂದೇ ಕುಟುಂಬಕ್ಕೆ ನಾಲ್ಕು ಟಿಕೆಟ್ ಅವರ ವೈಯಕ್ತಿಕ ವಿಚಾರ'- ಸಿಎಂ

ಬೆಂಗಳೂರು: ನಮಗೆ ಗೆಲ್ಲುವ ಮಾನದಂಡ ಮುಖ್ಯವಾಗಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾರ್ಚ್ ಫಸ್ಟ್ ವೀಕ್ ನಲ್ಲಿ ಕಾಂಗ್ರೆಸ್ ನಾಯಕರೆಲ್ಲಾ ಸೇರಿ ಒಟ್ಟಾಗಿ ಸಭೆ ನಡೆಸುತ್ತೇವೆ.
ಬೆಂಗಳೂರು: ನಮಗೆ ಗೆಲ್ಲುವ ಮಾನದಂಡ ಮುಖ್ಯವಾಗಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾರ್ಚ್ ಫಸ್ಟ್ ವೀಕ್ ನಲ್ಲಿ ಕಾಂಗ್ರೆಸ್ ನಾಯಕರೆಲ್ಲಾ ಸೇರಿ ಒಟ್ಟಾಗಿ ಸಭೆ ನಡೆಸುತ್ತೇವೆ. ಸದ್ಯ ಮನೆ ಮನೆಗೆ ಕಾಂಗ್ರೆಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ಸದಸ್ಯ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ವಿತರಿಸಲು ತಾಲೂಕುಗಳಿಗೆ ಭೇಟಿ ನೀಡುವ ಕಾರ್ಯಕ್ಕೆ
ಚಾಲನೆ ನೀಡಲಾಗಿದೆ ಎಂದರು.
ನವ ದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿರುವ ಅವರು, ಒಂದೇ ಕುಟುಂಹಕ್ಕೆ ನಾಲ್ಕು ಟಿಕೆಟ್ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಅವರ ವೈಯಕ್ತಿಕ ವಿಷಯಕ್ಕೆ ಬಿಟ್ಟಿದ್ದು, ನನ್ನ ಸಹಮತ ಇದೆ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಅಂತಿಮವಾದದ್ದು ಎಂದರು.
Comments