ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

ನವದೆಹಲಿಯಲ್ಲಿರುವ ಕಾಂಗ್ರೆಸ್ ನ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ನ 6 ಮುಖ್ಯಮಂತ್ರಿಗಳು ಸೂಚಕರಾಗಿ ಸಹಿ ಹಾಕಿದ್ದಾರೆ. ಕಾಂಗ್ರೆಸ್ ನ ರಾಜ್ಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಕಾಂಗ್ರೆಸ್ ಕೇಂದ್ರ ಕಚೇರಿಗೆ ತೆರಳಲಿದ್ದು ರಾಹುಲ್ ಗಾಂಧಿಗೆ ಬೆಂಬಲ ಸೂಚಿಸಿದ್ದಾರೆ. ಗುಜರಾತ್ ನಲ್ಲಿ ಗೆಲುವಿನ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ನಾಮಪತ್ರ ಸಲ್ಲಿಕೆ ಉತ್ಸಾಹ ಹೆಚ್ಚಿಸಿದೆ.
ಗುಜರಾತ್ ನಲ್ಲಿ ಗೆಲುವಿನ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ನಾಮಪತ್ರ ಸಲ್ಲಿಕೆ ಉತ್ಸಾಹ ಹೆಚ್ಚಿಸಿದೆ. ಎರಡು ದಶಕಗಳ ನಂತ್ರ ಕಾಂಗ್ರೆಸ್ ಅಧ್ಯಕ್ಷರಾಗಿ ಹೊಸಬರ ನೇಮಕವಾಗ್ತಿದೆ. 1998ರಿಂದ ಇಲ್ಲಿಯವರೆಗೆ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿದ್ದರು. ರಾಹುಲ್ ಹೊರತುಪಡಿಸಿ ಮತ್ತ್ಯಾರೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ. ಹಾಗಾಗಿ ರಾಹುಲ್ ದಾರಿ ಸುಗಮವಾಗಿದೆ. ಪಕ್ಷದ ಹೊಣೆ ರಾಹುಲ್ ಹೆಗಲಿಗೇರಲಿದೆ. ಈಗ ಒಂದು ಸೆಟ್ ನಾಮಪತ್ರಕ್ಕೆ ಸಹಿ ಬಿದ್ದಿದೆ. ಇನ್ನೂ 75 ನಾಮಪತ್ರಕ್ಕೆ ಸಮರ್ಥಕರು ಸಹಿ ಹಾಕಲಿದ್ದಾರೆ.
Comments