ಯಡಿಯೂರಪ್ಪಾ ವಿರುದ್ಧ ಮೊಕದ್ದಮೆ- ಎಂಬಿ ಪಾಟೀಲ್

ಬೆಂಗಳೂರು: ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ವಿಚಾರದ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪಾ ಮತ್ತು ಪ್ರತ್ಯೇಕ ಆಂದೋಲನವನ್ನು ಮುನ್ನಡೆಸುತ್ತಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಮಧ್ಯೆ ಸಣ್ಣ ಪ್ರಮಾಣದ ಸಮರ ಪ್ರಾರಂಭವಾಗಿದೆ.

ಯಡಿಯೂರಪ್ಪಾ ಅವರು ಪಾಟೀಲ್ ಸಿದ್ದರಾಮಯ್ಯನವರ ಕಮಿಷನ್ ಏಜಂಟ್ ರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು , ಈ ಆರೋಪಕ್ಕೆ ಯಡಿಯೂರಪ್ಪಾ ಸೂಕ್ತ ದಾಖಲೆ ಒದಗಿಸಬೇಕು ಇಲ್ಲವೆ ಕಾನೂನು ಕ್ರಮ ಎದುರಿಸಬೇಕೆಂದು ಪಾಟೀಲ್ ಒತ್ತಾಯಿಸುತ್ತಿದ್ದಾರೆ. ಯಡಿಯೂರಪ್ಪ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ವಕೀಲರ ತಂಡದ ಜತೆ ಚರ್ಚಿಸುತ್ತೇನೆ. ಯಾವ ಪ್ರಕರಣದಡಿ ಮೊಕದ್ದಮೆ ದಾಖಲಿಸಬೇಕು ಎಂಬುದನ್ನು ಯೋಚಿಸಿ, ವಕೀಲರು ನಿರ್ಧರಿಸಲಿದ್ದಾರೆ ಎಂದು ಪಾಟೀಲ್ ಹೇಳಿದ್ದಾರೆ.
Comments