ಹೈಕಮಾಂಡ್ ಬುಲಾವ್ ಇಲ್ಲ

ಗದಗ: ಗುಜುರಾತ್ ಚುನಾವಣೆಗೆ ಹೈಕಮಾಂಡ್ ನಿಂದ ನನಗೆ ಯಾವುದೇ ಬುಲಾವ್ ಬಂದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಗದಗ: ಗುಜುರಾತ್ ಚುನಾವಣೆಗೆ ಹೈಕಮಾಂಡ್ ನಿಂದ ನನಗೆ ಯಾವುದೇ ಬುಲಾವ್ ಬಂದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ. ಗದಗದಲ್ಲಿ ಸುದ್ದಿಗಾರರ ಜತೆಗೆ ಮಾತನಾಡುತ್ತಿದ್ದ ಎಚ್. ಕೆ ಪಾಟೀಲ್ ಅವರು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಸಿದ್ಧಪಡಿಸಲು , ಅಂಕಿತ ಹಾಕಲು ಬೆಂಗಳೂರು ಹೊರಟಿದ್ದೇನೆ ಎಂದರು.
ರಾಹುಲ್ ಗಾಂಧಿ ಗುಡಿಗಳಿಗೆ ಹೋದ್ರು ರಾಜಕೀಯ ಮಾಡುತ್ತಾರೆ. ಬಿಜೆಪಿ ಬುದ್ಧಿಮಟ್ಟ ಕಡಿಮೆ ಇದೆ ಎಂಬುದನ್ನು ತೋರಿಸುತ್ತದೆ. ಗುಜುರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಸ್ಪಂದನ ಬರುತ್ತಿದೆ. ಬಿಜೆಪಿ ಚುನಾವಣೆ ಗೆಲ್ಲುವ ಕುತಂತ್ರ ಪ್ರಯತ್ನ ಮಾಡುತ್ತಿದೆ. ಬಿಜೆಪಿ ವರ್ತನಾ ಶೈಲಿ ನೋಡಿದರೆ ಸಾಕಷ್ಟು ಆತಂಕ ಅಂಜಿಕೆಗೆ ಒಳಗಾಗುವಂತಿದ್ದಾರೆ ಎಂದರು.
Comments