ನನಗೆ ಬೇಳೆ ಸಾರು ಮಾಡಲು ಬರುತ್ತೆ,ಆದ್ರೆ ರೊಟ್ಟಿ ಮಾಡಲು ಕಷ್ಟವಾಗುತ್ತೆ

02 Dec 2017 10:21 AM | Politics
302 Report

ಹೌದು, ನಿನ್ನೆ ಹಿಂದೂಸ್ತಾನ್ ಲೀಡರ್‌‌ಶಿಪ್‌ ಶೃಂಗಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ಬಂದಿರುವ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ, ಡಿನ್ನರ್‌ ವೇಳೆ ಬೇಳೆ ಸಾರಿನ ಬಗ್ಗೆ ಮಾತನಾಡಿದ್ದಾರೆ.

ನಾನು ಬೇಳೆ ಸಾರು ಮಾಡುತ್ತೇನೆ. ನನ್ನ ಭಾರತ ಮತ್ತು ಪಾಕಿಸ್ತಾನ ಸ್ನೇಹಿತರ ತಾಯಿಯಂದಿರು ಬೇಳೆ ಸಾರು ಮಾಡುವುದು ಹೇಗೆಂದು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಒಬಾಮಾ ಮಾತನಾಡುತ್ತಾ, ಬೇಳೆ ಸಾರು ಮಾಡುವೆ. ಆದ್ರೆ ನನಗೆ ರೊಟ್ಟಿ ಅಥವಾ ಚಪಾತಿ ಮಾಡಲು ಕಷ್ಟ ಎಂದು ಹೇಳಿದ್ದಾರೆ. 

Edited By

venki swamy

Reported By

Madhu shree

Comments