ಅಪ್ಪನ ಮನದಾಳದ ವಿಷಯಗಳನ್ನು ಜನತೆಯ ಮುಂದಿಡುತ್ತೇನೆ: ನಿಖಿಲ್
ಅಭಿವೃದ್ಧಿ ಗುರಿ ಹೊಂದಿರುವ ಯುವಕರು ರಾಜಕೀಯಕ್ಕೆ ಬರಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕರೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆ ಕುಮಾರಸ್ವಾಮಿಯವರ ಪರವಾಗಿ ರಾಜ್ಯಾದ್ಯಂತ ಪ್ರಚಾರ ಮಾಡಲು ಬಯಸಿದ್ದೇನೆ. ಅವರ ಮನದಾಳದ ವಿಷಯಗಳನ್ನು ಜನತೆಯ ಮುಂದಿಡುತ್ತೇನೆ ಎಂದು ತಿಳಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಂದೆ ಕುಮಾರಸ್ವಾಮಿ ಮತ್ತು ದೊಡ್ಡಪ್ಪ ಎಚ್.ಡಿ.ರೇವಣ್ಣ ಮಾತ್ರ ಸ್ಪರ್ಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಪ್ರಜ್ವಲ್ ರೇವಣ್ಣ ಚುನಾವಣೆ ಸ್ಪರ್ಧಿಸುವ ಬಗ್ಗೆ ಮಾತನಾಡಲು ನಿರಾಕರಿಸಿದರು.ಜೆಡಿಎಸ್ ಪಕ್ಷ ಮುಂಬರುವ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಗೆಲ್ಲುವಂತಾಗಲು ಹಗಲಿರಳು ಶ್ರಮಿಸುತ್ತೇನೆ. ಚುನಾವಣೆ ನಂತರ ಸಿನೆಮಾ ಕ್ಷೇತ್ರದಲ್ಲಿಯೇ ಮುಂದುವರಿಯುವುದಾಗಿ ನಿಖಿಲ್ ಗೌಡ ತಿಳಿಸಿದ್ದಾರೆ.
Comments