ಆರ್.ಎಂ.ಮಂಜುನಾಥ ಗೌಡರ ಚಿತ್ತ ಜೆಡಿಎಸ್ ನತ್ತ
ಡಿಸೆಂಬರ್ 2ನೇ ವಾರದಲ್ಲಿ ಮಂಜುನಾಥ ಗೌಡ ಮತ್ತು ಅವರ ಬೆಂಬಲಿಗರು ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಪಕ್ಷ ಸೇರುವ ಸಾಧ್ಯತೆ ಇದೆ. ಮಂಜುನಾಥ ಗೌಡರು ಜೆಡಿಎಸ್ ಸೇರಿದರೆ ಕ್ಷೇತ್ರದ ರಾಜಕೀಯ ಕುತೂಹಲಕ್ಕೆ ಕಾರಣವಾಗಲಿದೆ.
ನವೆಂಬರ್ 28ರಂದು ಬೇಗುವಳ್ಳಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಮದನ್ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆ ನಡೆದಿದೆ. ಆರ್.ಎಂ.ಮಂಜುನಾಥ ಗೌಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ, ಅವರು ಪಕ್ಷ ಸೇರಬಹುದು ಎಂದು ಸುದ್ದಿಗಳು ಹಬ್ಬಿವೆ. 2013ರ ಚುನಾವಣೆಯಲ್ಲಿ ಆರ್.ಮದನ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 21,295 ಮತಗಳನ್ನು ಪಡೆದಿದ್ದರು. ಆದರೆ, ಈ ಬಾರಿ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ ಗೌಡರು ಸ್ಪರ್ಧಿಸಲಿ ಎಂದು ಅವರೇ ಹೇಳುತ್ತಿದ್ದಾರೆ. ಆದ್ದರಿಂದ, ಮಂಜುನಾಥ ಗೌಡರು ಜೆಡಿಎಸ್ ಸೇರಬಹುದು ಎಂದು ಅಂದಾಜಿಸಲಾಗಿದೆ. 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಆರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಇಬ್ಬರೂ, ಕಾರ್ಯಕರ್ತರ ಬೃಹತ್ ಬೆಂಬಲ ಹೊಂದಿದ್ದಾರೆ. ಇವರ ನಡುವೆ ಮಂಜುನಾಥ ಗೌಡರು ಸ್ಪರ್ಧೆಗಿಳಿದರೆ ರಾಜಕೀಯ ಕಣ ಕುತೂಹಲ ಮೂಡಿಸಲಿದೆ.
Comments