ಕೆಪಿಜೆಪಿ ಪಕ್ಷಕ್ಕೆ ಬರೋರಿಗೆ ಉಪ್ಪಿ ಹೇಳಿದು ಹೀಗೆ
ನಮ್ಮದು ಕನ್ಫ್ಯೂಷನ್ ಸಿನಿಮಾ ಅಲ್ಲ. ಥ್ರಿಲ್ಲರ್ ಸಿನಿಮಾನೂ ಅಲ್ಲ , ಇದು ಟ್ರಾಥ್ಫುಲ್ ಸಿನಿಮಾ.ಇದು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಕುರಿತು ಸಂಸ್ಥಾಪಕ ಉಪೇಂದ್ರ ಹೇಳಿದ ಮಾತು.ಮೈಸೂರಿನಲ್ಲಿ ಪಕ್ಷ ಸಂಘಟನೆಯ ಚಟುವಟಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಮತ ಹಾಕಿ ಎಂದು ಬೇಡುವುದಿಲ್ಲ. ದೇಶ ಸೇವೆ ಮಾಡಲು ಬಂದಿದ್ದು, ನೀವೆ ಗೆಲ್ಲಿಸಬೇಕು ಹೊರತು ನಾನು ಗೆಲ್ಲುತ್ತೇನೆ ಎಂದು ಹೇಳುವುದಿಲ್ಲ ಎಂದರು.
ನನಗೆ ಹಲವು ಗಣ್ಯರು, ಹಿರಿಯರು ಬೆಂಬಲ ನೀಡಿದ್ದಾರೆ. ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಅವರು ಬೆಂಬಲ ನೀಡಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ಜನರು ಬೆಂಬಲ ನೀಡಲಿದ್ದಾರೆ.ಇದುವರೆಗೆ ಯಾವ ನಟರೂ ಪಕ್ಷ ಸೇರುವುದಾಗಿ ಹೇಳಿಲ್ಲ ಆದರೆ ಶಿವಣ್ಣ, ಯಶ್ ಅವರು ಬೆಂಬಲ ಸೂಚಿಸಿದ್ದಾರೆ ಎಂದು ಉಪೇಂದ್ರ ಹೇಳಿದರು.ರಾಜಕೀಯದಲ್ಲಿ ಬದಲಾವಣೆಗಾಗಿ ಕ್ಯಾಶ್ಲೆಸ್ ಕೆಪಿಜೆಪಿ ಹುಟ್ಟುಹಾಕಿ ಸಮಾಜದಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ.ಪಕ್ಷ ಆರಂಭವಾದಾಗ ಕೇವಲ 10 ಶೇಕಡಾ ಜನರಿಗೆ ಗೊತ್ತಾಗಿತ್ತು ಆದರೆ ಈಗ ಮಾಧ್ಯಮಗಳ ಮೂಲಕ ಹಳ್ಳಿ ಹಳ್ಳಿಯ ಜನರಿಗೆ ಪಕ್ಷದ ಬಗ್ಗೆ ತಿಳಿದಿದೆ.ಎಂದು ಉಪೇಂದ್ರ ಹೇಳಿದರು.ನಾನು ನಾಯಕನಾಗಬೇಕು ಎನ್ನುವವರು ನಮ್ಮ ಪಕ್ಷಕ್ಕೆ ಬೇಡ. ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ದುಡಿಯುವವರು ನಮ್ಮ ಪಕ್ಷಕ್ಕೆ ಬೇಕು ಎಂದು ಉಪೇಂದ್ರ ಹೇಳಿದರು.
Comments