ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳ ಕಾನೂನು ರಕ್ಷಣೆ

ಬೆಂಗಳೂರು: ದೇಶದಲ್ಲಿ ಅಡುಗೆ ಮನೆಗೆ ಸೀಮಿತ ಎಂತಿದ್ದ ಸ್ತ್ರೀ ಈಗ ಆಡಳಿತದಲ್ಲಿ ಸ್ತ್ರೀ ಪರ್ವ ಎಂಬತಾಗಿದೆ. ರಾಜ್ಯದ ಹಲವೆಡೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರು: ದೇಶದಲ್ಲಿ ಅಡುಗೆ ಮನೆಗೆ ಸೀಮಿತ ಎಂತಿದ್ದ ಸ್ತ್ರೀ ಈಗ ಆಡಳಿತದಲ್ಲಿ ಸ್ತ್ರೀ ಪರ್ವ ಎಂಬತಾಗಿದೆ. ರಾಜ್ಯದ ಹಲವೆಡೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಆಡಳಿತ ನಿರ್ವಹಣೆ ಕುರಿತು ವಿಷಯ ಪ್ರಸ್ತಾಪ ಆದಾಗ ಉನ್ನತ ಹುದ್ದೆಗಳಿಗೆ ಪುರುಷರು ಆಯ್ಕೆ ಯಾಗುತ್ತಾರೆ. ಮಹಿಳೆಯರು ಕಡಿಮೆ. ಇತ್ತೀಚೆಗೆ ಪೊಲೀಸ್ ಮಹಾ ನಿರ್ದೇಶಕರಾಗಿ ನೀಲಮಣಿ ಎನ್. ರಾಜು ಅಧಿಕಾರ ವಹಿಸಿಕೊಂಡಿರುವುದು ಹೆಮ್ಮೆಯ ಸಂಗತಿ.
ಅಲ್ಲದೇ ಈಗಾಗ್ಲೇ ರಾಜ್ಯದ 16 ಐಪಿಎಸ್ ಮಹಿಳಾ ಅಧಿಕಾರಿಗಳು ಕಾನೂನು ರಕ್ಷಣೆಯಲ್ಲಿ ತೊಡಗಿದ್ದಾರೆ.ಇನ್ನು ಬೆಂಗಳೂರಿನ 17 ಮಹಿಳಾ ಐಎಎಸ್ ಅಧಿಕಾರಿಗಳು ಆಡಳಿತ ನಿರ್ವಹಣೆಯಲ್ಲಿ ಕೈ ಜೋಡಿಸಿರುವುದು ಮಹಿಳೆಯರಲ್ಲಿ ಮತ್ತಷ್ಟು ಬಲ ತುಂಬಿದಂತಾಗಿದೆ. ಮಹಿಳೆಯರು ಮಾತ್ರವಲ್ಲ ಎಲ್ಲರ ರಕ್ಷಣೆ ಪೊಲೀಸರ ರಕ್ಷಣೆ ಎನ್ನುವ ರಾಜ್ಯದ ಮೊದಲ ಮಹಾ ನಿರ್ದೇಶಕರಾದ ನೀಲಮಣಿ, ಯಾರೇ ಆಗಿರಲಿ ಅನ್ಯಾಯಕ್ಕೆ ತುತ್ತಾದವರಿಗೆ ನ್ಯಾಯ ಕೊಡಿಸಲು , ಜನ ಸ್ನೇಹಿಯಾಗಲು ಇಲಾಖೆಯ ಎಲ್ಲಾ ಸಿಬ್ಬಂದಿ, ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಡಲಾಗಿದೆ. ಜನರ ರಕ್ಷಣೆಗೆ ಹಲವು ಕಾನೂನುಗಳಿವೆ. ಆದರೆ ಮುಂದೆ ಬಂದು ದೂರು ಕೊಡಲು ಹೆದರುತ್ತಾರೆ. ಅನ್ಯಾಯಕ್ಕೆ ಒಳಗಾದವರು ಯಾವುದೇ ಹಿಂಜರಿಕೆ ಇಲ್ಲದೆ ಠಾಣೆಗೆ ಬಂದು ದೂರು ಕೊಡಬೇಕು. ಪೊಲೀಸರು ಸ್ಪಂದಿಸಿ ಅಂಥವರಿಗೆ ರಕ್ಷಣೆ ನೀಡಬೇಕು ಎನ್ನುವುದು ನೀಲಮಣಿ ಅವರ ಅಭಿಪ್ರಾಯ.
ರಾಜ್ಯದ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ರತ್ನಪ್ರಭ ಅಧಿಕಾರ ಸ್ವೀಕರಿಸಲಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 17 ಐಎಎಸ್ ಅಧಿಕಾರಿಗಳು ಪ್ರಧಾನ ಕಾರ್ಯದರ್ಶಿಗಳಾಗಿ ಹೆಚ್ಚುವರಿ ಕಾರ್ಯದರ್ಶಿ ಆಗಿ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
Comments