ಕೊಟ್ಟ ಮಾತು ಉಳಿಸಿಕೊಂಡ ಜೆಡಿಎಸ್ ಸದಸ್ಯ
14 ತಿಂಗಳ ಕಾಲ ಆಡಳಿತ ನಡೆಸಿದ್ದ ಜೆಡಿಎಸ್ ಪಕ್ಷ, 14 ತಿಂಗಳು ಕಾಂಗ್ರೆಸ್‌ಗೆ ಬಿಟ್ಟು ಕೊಡೋದಾಗಿ ಒಪ್ಪಂದವಾಗಿತ್ತು. ಅವಧಿ ಮುಗಿದ ಹಿನ್ನಲೆ ಕೊಟ್ಟ ಮಾತಿನಂತೆ ನರಸಿಂಹಮೂರ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ದೇವನಹಳ್ಳಿ ಪುರಸಭೆಯಲ್ಲಿ ಒಟ್ಟು 23 ಸದಸ್ಯರಿದ್ದು, ಅದರಲ್ಲಿ 11 ಜೆಡಿಎಸ್ 10 ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರರಿದ್ದಾರೆ. ಜೆಡಿಎಸ್‌ನಿಂದ ಎಸ್‌ಸಿ ಮೀಸಲು ಸ್ಥಾನಕ್ಕೆ ನರಸಿಂಹಮೂರ್ತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಿನ್ನೆ ದೊಡ್ಡಬಳ್ಳಾಪುರದ ಉಪವಿಭಾಗಾಧಿಕಾರಿಯನ್ನು ಭೇಟಿ ಮಾಡಿ ರಾಜೀನಾಮೆ ಅಂಗೀಕರಿಸುವಂತೆ ಕೋರಿದ್ದಾರೆ.
Comments