ಅನಿತಾ ಕುಮಾರಸ್ವಾಮಿ ನನ್ನ ಸಹೋದರಿ ಇದ್ದಂತೆ : ಡಿ ಕೆ ಶಿವಕುಮಾರ್

ಚನ್ನಪಟ್ಟಣ ಕ್ಷೇತ್ರಕ್ಕೆ ಜೆಡಿಎಸ್‍ನಿಂದ ಅನಿತಾ ಕುಮಾರಸ್ವಾಮಿ ಬಂದು ಸ್ಪರ್ಧಿಸಿದರೂ ನಾವು ಗೌರವಿಸುತ್ತೇವೆ. ಅವರು ನನ್ನ ಸಹೋದರಿ ಇದ್ದಂತೆ. ಅವರು ಕೂಡ ನನ್ನನ್ನು ಅಣ್ಣ ಎಂದು ಪ್ರೀತಿ ಗೌರವದಿಂದ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರನ್ನು ನಾನು ಮಾತನಾಡಿಸುತ್ತೇನೆ. ನಾಳೆ ಯೋಗೇಶ್ ಎದುರಿಗೆ ಸಿಕ್ಕರೂ ಮಾತನಾಡಿಸಲು ಮುಜುಗರ ಪಡುವುದಿಲ್ಲ.
ರಾಜಕೀಯವಾಗಿ ನಾನು ಯಾರನ್ನೂ ದ್ವೇಷಿಸುವುದಿಲ್ಲ. ಹಾಗೆಂದು ಯಾರೊಂದಿಗೂ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುವುದಿಲ್ಲ ಎಂದರು.ಚನ್ನಪಟ್ಟಣ ಕ್ಷೇತ್ರಕ್ಕೆ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ. ಡಿ.ಕೆ.ಸುರೇಶ್ ಅವರು ಸಂಸದರಾಗಿರುವುದರಿಂದ ಅವರ ಸ್ಪರ್ಧೆಗೆ ಹೈಕಮಾಂಡ್ ಒಪ್ಪುವುದು ಕಷ್ಟವಿದೆ. ಇತಿಹಾಸದಲ್ಲೇ ಇಷ್ಟು ಒಳ್ಳೆಯ ಸಂಸದರು ಸಿಕ್ಕಿಲ್ಲ ಎಂದು ಜನಕೊಂಡಾಡುತ್ತಿದ್ದಾರೆ. ಆದರೆ, ಸುರೇಶ್ ಅವರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂದು ಬಹಳಷ್ಟು ಕ್ಷೇತ್ರದಿಂದ ಬೇಡಿಕೆ ಬಂದಿದೆ ಎಂದು ತಿಳಿಸಿದರು. ನಟಿ ರಮ್ಯಾ ಅವರು ಎಐಸಿಸಿ ಸಾಮಾಜಿಕ ಜಾಲ ತಾಣವನ್ನು ನಿಭಾಯಿಸುವ ಪ್ರಮುಖ ಜವಾಬ್ದಾರಿ ಹೊತ್ತಿದ್ದಾರೆ. ಅವರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ಟೀಮ್‍ನ ಸ್ಟಾರ್ ಕ್ಯಾಂಪೇನರ್ ಆಗಿರುತ್ತಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕಮಾಂಡ್ ಸೂಚಿಸಿದರೆ ಸ್ವಾಗತಿಸುವುದಾಗಿ ಹೇಳಿದರು.
Comments