ಯಡಿಯೂರಪ್ಪಾ ಕೈ ಮುಗಿತೀನಿ.. ಸಿಎಂ ತಿರುಗೇಟು
ಗದಗ: ಮಹಾದಾಯಿ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಾದ ಇತ್ಯರ್ಥ್ಯ ಪಡಿಸುವುದಕ್ಕಾಗಿ ನೀಡಿರುವ ಬಿಎಸ್ ವೈ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ತಿರುಗೇಟು ನೀಡಿರುವುದು ಬೆಳಕಿಗೆ ಬಂದಿದೆ.
ಗದಗ: ಮಹಾದಾಯಿ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಾದ ಇತ್ಯರ್ಥ್ಯ ಪಡಿಸುವುದಕ್ಕಾಗಿ ನೀಡಿರುವ ಬಿಎಸ್ ವೈ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ತಿರುಗೇಟು ನೀಡಿರುವುದು ಬೆಳಕಿಗೆ ಬಂದಿದೆ. ಗದಗ ಜಿಲ್ಲೆಯ ನರಗುಂದದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಬಿಎಸ್ ವೈ ಕೈ ಮುಗಿತೀನಿ ದಯವಿಟ್ಟು ವಿವಾದ ಬಗೆಹರಿಸಿ ಎಂದರು.
ಯಡಿಯೂರಪ್ಪಾ ರಾಜ್ಯದ ರೈತರ ಪರ ಕೆಲಸ ಮಾಡಲಿ, ರೈತರ ಪರ ಕಾಳಜಿ ರಾಜಕೀಯವಾಗಿ ಬಳಸಿಕೊಳ್ಳುವುದು ತಪ್ಪು, ಮಹಾದಾಯಿ ಟ್ರಿಬ್ಯೂಲ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು. ಮಹದಾಯಿ ವಿವಾದ ಇತ್ಯರ್ಥಕ್ಕಾಗಿ ಪ್ರಧಾನಿ ಮೋದಿ ಅವರ ಬಳಿ ಗೋಗರದೆ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಮೋದಿ ರೀತಿ ಯಾರು ವರ್ತಿಸಿರಲಿಲ್ಲ ಎಂದು ದೂರಿದರು.
Comments