ರಾಜ್ಯದ ಜನತೆಯ ಬಳಿ ಚಂಪಾ ಅವರು ಕ್ಷಮೆ ಕೇಳಬೇಕು : ಶೋಭಾ ಕರಂದ್ಲಾಜೆ

ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಉದ್ದೇಶಪೂರ್ವಕವಾಗಿಯೂ ಎಡಪಂಥೀಯ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅವಕಾಶ ನೀಡುವ ಮೂಲಕ ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡಲಾಗಿದೆ. ಇದಕ್ಕೆಲ್ಲಾ ಸಮ್ಮೇಳನಾಧ್ಯಕ್ಷರೇ ನೇರ ಕಾರಣರಾಗಿರುವುದರಿಂದ ಕೂಡಲೇ ಚಂಪಾ ಅವರು ಕ್ಷಮೆ ಕೇಳಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಾಹಿತ್ಯ ಪರಿಷತ್ ವೇದಿಕೆ ಜನರಿಗೆ ಉತ್ತಮ ಸಂದೇಶ ನೀಡುವ ವೇದಿಕೆ ಆಗಬೇಕೆ ಹೊರತು ಸ್ವಂತ ವಿಚಾರಗಳನ್ನು ಮಂಡಿಸಲು ದುರ್ಬಳಕೆ ಮಾಡಿಕೊಳ್ಳಬಾರದು ಎಂದರು. ಚಂಪಾ ಅವರು ತಾಯಿ ಭುವನೇಶ್ವರಿ, ಆಚಾರ-ವಿಚಾರ, ದೇಶಕ್ಕೆ ಮಾರಕವಾಗುವ ವಿಚಾರಗಳನ್ನು ಕೆಣಕಿದ್ದಾರೆ. ತಾಯಿ ಭುವನೇಶ್ವರಿಗೆ ಕೈಮುಗಿಯದ ನಾಡ ದೇವತೆ ಚಾಮುಂಡೇಶ್ವರಿಗೆ ನಮಸ್ಕರಿಸದ ಇವರನ್ನು ಯಾವ ಕಾರಣಕ್ಕೆ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಯಿತು ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಾದರೂ ಇಂತಹ ಅಚಾತುರ್ಯಗಳು ನಡೆಯದಂತೆ ಕಸಾಪ ಎಚ್ಚರವಹಿಸಬೇಕು. ಒಡೆಯುವ ಮನಸ್ಸುಗಳು ರಾಕ್ಷಸಿ ಪ್ರವೃತ್ತಿ ಸಾಹಿತ್ಯ ರಚಿಸುತ್ತಾರೆ. ಚಂಪಾ ಅಂತಹ ಹಿನ್ನೆಲೆ ಉಳ್ಳವರನ್ನು ಮುಂದೆ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡದಂತೆ ಕನ್ನಡಿಗರು ನೋಡಿಕೊಳ್ಳಬೇಕು. ಮೈಸೂರಿನಲ್ಲಿ ಏನು ನಡೆಯಬಾರದಿತ್ತೋ, ಅದು ನಡೆದುಹೋಯಿತು ಎಂದು ವಿಷಾಧಿಸಿದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿದ್ದೆ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಕುಟುಂಬಕ್ಕೆ ಸಮ್ಮೇಳನದ ಆಹ್ವಾನ ನೀಡದೆ ಇರುವುದು ದುರದೃಷ್ಟಕರ. ಭಾರತ ಮಾತೆಯ ಮಗಳು ಕನ್ನಡ ಮಾತೆ ಎಂಬ ಕಲ್ಪನೆಯನ್ನು ಕುವೆಂಪು ಅವರು ಕೊಟ್ಟರು. ಆದರೆ ಭಾರತ ಬೇರೆ ಕರ್ನಾಟಕ ಬೇರೆ ಎಂದು ಢೊಂಗಿ ಜಾತ್ಯಾತೀತವಾದಿಗಳು ಪ್ರತಿಪಾದಿಸಲು ಅವಕಾಶ ಮಾಡಿಕೊಡಲಾಗಿದೆ. ಕನ್ನಡ ಭಾಷೆಗೆ ಜಾತಿ-ಧರ್ಮ-ಪಕ್ಷ ಭೇದವಿಲ್ಲ. ಕನ್ನಡ ವಿಚಾರಗಳು ಗೊತ್ತಿಲ್ಲದವರನ್ನು ಇನ್ನುಮುಂದಾದರೂ ದೂರವಿಡಿ ಎಂದು ಮನವಿ ಮಾಡಿದರು.
Comments