ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಅವರು, ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿರುವಾಗ ಗುಜರಾತ್ ಬಗ್ಗೆ ಮಲತಾಯಿ ಧೋರಣೆ ತಳೆದಿದ್ದೀರಿ. ಇದರಿಂದ ಗುಜರಾತ್ ಹಿಂದುಳಿಯಿತು. ಇದಕ್ಕೆ ನಿಮ್ಮನ್ನು ಜನರು ಎಂದಿಗೂ ಕ್ಷಮಿಸಲ್ಲ ಎಂದರು.
ಪ್ರಧಾನಿ ಮೋದಿ ಅವರು ಇಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಕಚ್ಚೀ ಭಾಷೆಯಲ್ಲೇ ಭಾಷಣ ಮಾಡಿದರು. ಮೊದಲಿಗೆ ಆಶಾಪುರ ಮಾತಾ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸಾವರ್ಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 'ನಾನು ಮೊದಲು ಆಶಾಪುರ ದೇವಿ ಬಳಿ ಪ್ರಾರ್ಥಿಸಿ ಬಂದಿದ್ದೇನೆ. ಜನತಾ ಜನಾರ್ಧನನ ಆಶೀರ್ವಾದ ಬೇಡುತ್ತಿದ್ದೇವೆ. ಇಲ್ಲಿನ ಜನರ ಪ್ರೀತಿ ವಿಶ್ವಾಸಗಳಿಗೆ ಅಭಾರಿಯಾಗಿದ್ದೇನೆ. ಜನರೊಂದಿಗೆ ಸಂವಾದ ನಡೆಸುವುದು ಅತ್ಯಂತ ಸಂತಸ ನೀಡುತ್ತಿದೆ' ಎಂದು ಹೇಳಿದರು
Comments