2ನೇ ಟೆಸ್ಟ್ ಪಂದ್ಯದಾಟದಲ್ಲಿ ಟೀಂ ಇಂಡಿಯಾಗೆ 239 ರನ್ ಗಳ ಭರ್ಜರಿ ಜಯ

2ನೇ ಟೆಸ್ಟ್ ಪಂದ್ಯದಾಟದಲ್ಲಿ ಟೀಂ ಇಂಡಿಯಾ 239 ರನ್ ಗಳ ಭರ್ಜರಿ ಅಂತರಿಂದ ಲಂಕಾ ತಂಡವನ್ನು ಸೋಲಿಸಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 1 0 ಮುನ್ನಡೆ ಸಾಧಿಸಿದೆ. ಭಾರತ ಒಂದನೇ ಇನಿಂಗ್ಸ್ ನಲ್ಲಿ 6 ವಿಕೆಟಿಗೆ 610ಕ್ಕೆ ಡಿಕ್ಲೇರ್ ಮಾಡಿಕೊಂಡಿತ್ತು. ಲಂಕಾ ಮೊದಲ ಇನ್ನಿಂಗ್ಸ್ ಗೆ 205 ರನ್ ಗೆ ಆಲ್ ಔಟ್ ಆಗಿತ್ತು.
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್ ನಲ್ಲಿ 166 ರನ್ ಗೆ ಆಲ್ ಔಟ್ ಆಗಿದ್ದು, ಟೀಂ ಇಂಡಿಯಾ 239 ರನ್ ಗಳ ಭರ್ಜರಿ ಜಯ ಸಾಧಿಸಿದೆ. 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಮೊದಲ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಆಕರ್ಷಕ 213 ರನ್ ಗಳ ದ್ವಿಶತಕ ಬಾರಿಸಿದ್ದರು. ಚೇತೇಶ್ವರ ಪೂಜಾರ 143 ರನ್ ಸಿಡಿಸಿದ್ದರೆ, ಮುರಳಿ ವಿಜಯ್ ಸಿ 128 ಹೊಡೆಯುವ ಮೂಲಕ ಶತಕ ದಾಖಲಿಸಿದ್ದರು.
Comments