ಹಿರಿಯ ವಕೀಲ ಸುಭಾಷ್ ಚಂದ್ರ ಜೆಡಿಎಸ್ ಸೇರ್ಪಡೆ ನಂತರ ಗೌಡರು ಹೇಳಿದ್ದೇನು

ಪ್ರಾದೇಶಿಕ ಪಕ್ಷವನ್ನು ಸೇರುವವರು ಬಹಳಷ್ಟು ಜನರಿದ್ದು, ಹಿರಿಯ ವಕೀಲ ಸುಭಾಷ್ ಚಂದ್ರ ಎಚ್. ಸುಣಗಾರ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಬಿಜಾಪುರ ಜಿಲ್ಲೆ ನಾಗಠಾಣ ಮತಕ್ಷೇತ್ರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಣಗಾರ ಅವರನ್ನು ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ರಾಜ್ಯದ ಜನರು ಈ ಬಾರಿ ಜೆಡಿಎಸ್ ಪರವಾಗಿದ್ದು, 224 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಹೇಳಿದರು.
Comments