ರಾಜಕೀಯ ನಿವೃತ್ತಿ ಬಗ್ಗೆ ಪುನರುಚ್ಚರಿಸಿದ ಸಿಎಂ ಸಿದ್ದರಾಮಯ್ಯ

ಉಪ ಚುನಾವಣೆಯಲ್ಲಿ ನನ್ನನ್ನು ರಾಜಕೀಯವಾಗಿ ಮುಗಿಸಲು ಎಲ್ಲ ಪಕ್ಷದವರು ಒಂದಾದರು. ಆದರೆ, ಜನರ ಆಶೀರ್ವಾದದಿಂದ ಮತ್ತೆ ರಾಜಕೀಯವಾಗಿ ಬೆಳೆಯುವಂತಾಯಿತು. ಮುಂದಿನ ಚುನಾವಣೆಯಲ್ಲಿ ಮತದಾರರ ಋಣ ತೀರಿಸಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದರು.
ಇನ್ನು ಇದೇ ವೇಳೆ ಅವರು ನಂಬಿಕೆ, ಮೂಢನಂಬಿಕೆ, ಅಪನಂಬಿಕೆ ಎಂದು ಮೂರು ವಿಧಗಳಿವೆ. ದೇವರಲ್ಲಿ ನಂಬಿಕೆ ಇರಬೇಕು, ದೇವರು ಎಲ್ಲೆಲ್ಲೂ ನೆಲೆಸಿರುತ್ತಾನೆ. ಪ್ರತಿಯೊಬ್ಬರನ್ನು ಪ್ರೀತಿಸುವ ಪ್ರವೃತ್ತಿ ಬೆಳಸಿಕೊಳ್ಳಿ. ಮೂಢನಂಬಿಕೆ ಒಳ್ಳೆಯದಲ್ಲ. ಅಪನಂಬಿಕೆ ಅದಕ್ಕಿಂತ ಕೆಟ್ಟದ್ದು, ಇವೆರಡನ್ನು ದೂರವಿಡಿ ಎಂದರು. ಉಪ ಚುನಾವಣೆ ಮೂಲಕ ರಾಜಕೀಯ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿವೃತ್ತಿ ಮಾತನ್ನು ಪುನರುಚ್ಚರಿಸಿದ್ದಾರೆ.
Comments