ಜೆಡಿಎಸ್ ಶಾಸಕನಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಭೂಗತ ಪಾತಕಿ ರವಿ ಪೂಜಾರಿಯಿಂದ ಧಮ್ಕಿ

ಮುಂದಿನ ಚುನಾವಣೆಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸದಂತೆ ಶಾಸಕ ಸಾ.ರಾ ಮಹೇಶ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದಾನೆ. ಈ ಮೂಲಕ ಮೈಸೂರು ರಾಜಕಾರಣದ ಮೇಲೂ ಭೂಗತ ಪಾತಕಿಗಳ ಕಣ್ಣು ಬಿದ್ದಿದ್ದು, ಯಾರ ಪ್ರೇರಣೆಯಿಂದ ಅಥವಾ ಯಾರು ಕೆ .ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲದಂತೆ ಮಾಡಿ ಎಂದು ಡೀಲ್ ನೀಡಿದ್ದಾರೆ ಎಂಬ ವಿಚಾರ ಇದೀಗ ಮೈಸೂರು ಮತ್ತು ಕೆ. ಆರ್ ನಗರದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ.
ಇನ್ನೂ ಶಾಸಕ ಸಾ.ರಾ.ಮಹೇಶ್ ಇಂದು ಬೆಳಿಗ್ಗೆ ಮೈಸೂರಿನ ತಮ್ಮ ಮನೆಯಲ್ಲಿದ್ದಾಗ ಅನಾಮಧೇಯ ಕರೆ ಮಾಡಿರುವ ವ್ಯಕ್ತಿ ನಾನು ಭೂಗತ ಪಾತಕಿ ರವಿಪೂಜಾರಿ ಮಾತನಾಡುತ್ತಿರುವುದು ಎಂದು ಹೇಳಿದ್ದು, ಮುಂಬರುವ 2018ರ ಚುನಾವಣೆಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬೆದರಿಕೆಯ ಕರೆಗಳು ವಿದೇಶದ ಟರ್ಕಿ ಅಥವಾ ಮಲೇಷಿಯಾ ಲಾವೋಸ್ ನಗರದಿಂದ ಬಂದಿದ್ದ ಕರೆ ಎನ್ನಲಾಗಿದ್ದು, ಕರೆ ಮಾಡಿರುವ ನಂಬರ್ ಅನ್ನು ಶಾಸಕ ಸಾ.ರಾ.ಮಹೇಶ್ ಮೈಸುರು ನಗರ ಪೊಲೀಸ್ ಕಮೀಷನರ್ ಅವರನ್ನು ತಾವೇ ಖುದ್ದು ಭೇಟಿ ಮಾಡಿ ದೂರು ನೀಡಿದ್ದಾರೆ.
Comments