ಸಾಹಿತ್ಯ ಸಮ್ಮೇಳನದಲ್ಲಿ ಭಾಷಣದುದ್ದಕ್ಕೂ 'ಕಾಂಗ್ರೆಸ್ ಗೆ ಮತ ನೀಡಿ' ಎಂದು ಮಾತನಾಡಿದ ಚಂಪಾ

ಮೈಸೂರು: ಸಾಹಿತಿಗಳು, ಲೇಖಕರ ಬಾಯಲ್ಲಿ ಸದಾ ನಾಡು ನುಡಿ, ಭಾಷೆ ಬಗ್ಗೆ ಮಾತುಗಳು ಕೇಳಿ ಬರುತ್ತವೆ. ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಅಧ್ಯಕ್ಷರಾಗಿರುವ ಚಂಪಾ ಅವರೇ 'ಕಾಂಗ್ರೆಸ್ ಗೆ ಮತ ನೀಡಿ' ಎಂದು ಭಾಷಣ ಮಾಡುವುದರ ಮೂಲಕ ಬೇಸರ ಮೂಡಿಸಿದ್ದಾರೆ.
ಮೈಸೂರು: ಸಾಹಿತಿಗಳು, ಲೇಖಕರ ಬಾಯಲ್ಲಿ ಸದಾ ನಾಡು ನುಡಿ, ಭಾಷೆ ಬಗ್ಗೆ ಮಾತುಗಳು ಕೇಳಿ ಬರುತ್ತವೆ. ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಅಧ್ಯಕ್ಷ ಚಂಪಾ ಅವರೇ ಕಾಂಗ್ರೆಸ್ ಗೆ ಮತ ನೀಡಿ ಎಂದು ಭಾಷಣ ಮಾಡುವುದರ ಮೂಲಕ ಚಂಪಾ ಅವರು ಬೇಸರ ಮೂಡಿಸಿದ್ದಾರೆ. ಭಾಷಣ ಕೇಳಲು ಬಂದಿದ್ದ ಹಲವಾರು ಸಾಹಿತ್ಯಾಭಿಮಾನಿಗಳಿಗೆ ನಿರಾಸೆ ಆಗಿರುವುದು ಬೆಳಕಿಗೆ ಬಂದಿದೆ.
ಇತಿಹಾಸದಲ್ಲಿ ಮೊದಲನೇಯ ಬಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೇ ರಾಜಕೀಯ ಪ್ರೇರಿತವಾಗಿ ಮಾತನಾಡಿ, ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಕೈ ಬಿಡಿ, ಅವರು ಸರಿಯಿಲ್ಲ, ಇಂದು ನಡೆಯುತ್ತಿರುವ ಸಮ್ಮೇಳನಕ್ಕೂ ಅವರು ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಚಂಪಾ ಸಲಹೆ ನೀಡಿದ್ದಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿರುವ ಸಾಹಿತಿ ಚಂಪಾ ಅವರು ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ನ್ನು ಬೆಂಬಲಿಸುವಂತೆ ಬಹಿರಂಗವಾಗಿ ಮತಯಾಚನೆ ಮಾಡಿದ್ದಾರೆ.
Comments