ಯಡಿಯೂರಪ್ಪನ ಮಾತಿಗೆ ಗೌಡರ ಪ್ರಶ್ನೆ?
ಕೊಪ್ಪಳ ಗವಿಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದ ವೇಳೆ, ಮಹದಾಯಿ ಯೋಜನೆಯನ್ನು ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ತಿಂಗಳೊಳಗಾಗಿ ಬಗೆಹರಿಸುತ್ತಾರೆ ಎಂದು ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರ ನೀಡದೆ ದೇವೇಗೌಡರು ಕೈಮುಗಿದರು.
ಬಳಿಕ ಉತ್ತರಿಸಿ, ನಾನು ಪ್ರಧಾನಮಂತ್ರಿ ಆಗಿದ್ದಾಗಲೇ ಮಹದಾಯಿ ಯೋಜನೆಗೆ ಮಂಜೂರಾತಿ ನೀಡಿದ್ದೇನೆ. ಅನೇಕ ಪಕ್ಷಗಳ ಸರ್ಕಾರ ಆಳ್ವಿಕೆಯಲ್ಲಿದ್ದರೂ ಅಂಥ ಸಾಹಸ ಮಾಡಿದ್ದೇನೆ. ಅತ್ಯಂತ ಬಲಿಷ್ಠ ಸರ್ಕಾರ ನಿಮ್ಮದು, ನೀವು ಅನುಮೋದನೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕೈಮುಗಿದು ಕೇಳಿದರೂ ಮಾಡಲಿಲ್ಲ. ಯಡಿಯೂರಪ್ಪ ಮಾಡಿಸುವುದಾದರೆ ಮಾಡಿಸಲಿ ಎಂದರು.
Comments