ಟ್ರೋಲ್ ಗೂಂಡಾಗಿರಿ ವಿರುದ್ಧ ಪ್ರಕಾಶ್ ರೈ ಆಕ್ರೋಶ

23 Nov 2017 1:12 PM | Politics
536 Report

'ನನ್ನ ರಿಯಲ್ ಲೈಫ್'ನಲ್ಲೂ ಖಳನಾಯಕ ಅಂತ ಕರೆಯೋದಕ್ಕೆ ಶುರು ಮಾಡಿದ್ದಾರೆ. ನೀನು ನಟನೇ ಅಲ್ಲ ತಮಿಳುನಾಡಿಗೆ ಹೋಗು ಅಂತಾರೆ. ಪದ್ಮಾವತಿ ಚಿತ್ರದ ನಟಿ ದೀಪಿಕಾ ಮೂಗು ಕತ್ತರಿಸ್ತೀವಿ ಅಂತಾರೆ. ಇಂತಹ ಟ್ರೋಲ್ ವಿರುದ್ಧ ನಾನು ಧ್ವನಿ ಎತ್ತಬೇಕು ಅಂದುಕೊಂಡಿದ್ದೇನೆ ' ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರೋಲ್ ಗೂಂಡಾಗಿರಿ ವಿರುದ್ಧ #just asking ಹೆಸರಲ್ಲಿ ನನ್ನ ಹೋರಾಟ ಮುಂದುವರೆಯುತ್ತದೆ. ಯಾವುದೇ ಹೇಳಿಕೆಗಳನ್ನ ಕೊಟ್ಟರು, ಟ್ರೋಲ್ ಮೂಲಕ ಹತ್ತಿಕ್ಕಲಾಗುತ್ತಿದೆ. ಇದು ಒಂದು ರೀತಿಯ ಗೂಂಡಾ ಪ್ರವೃತ್ತಿ ಎಂದು ಪ್ರಕಾಶ್ ರೈ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

Edited By

Hema Latha

Reported By

Madhu shree

Comments