ತೆರಿಗೆಗೆ ಹೊಸ ಕಾನೂನು ರಚಿಸುವ ಕಡೆ ಹೊಸ ಹೆಜ್ಜೆ ಇಟ್ಟಿರುವ ಮೋದಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "1961ರಲ್ಲಿ ಆದಾಯ ತೆರಿಗೆ ಕಾಯ್ದೆ ರಚನೆ ಮಾಡಲಾಗಿದೆ. 50 ವರ್ಷಗಳ ಹಿಂದಿನ ಕಾನೂನನ್ನು ಪುನಾರಚಿಸಬೇಕಾದ ಅಗತ್ಯವಿದೆ" ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಪೂರಕವಾಗಿ ಪರಿಶೀಲನೆ ನಡೆಸಲು ಕಾರ್ಯ ಪಡೆ ರಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ ಎಂದು ಹೇಳಿದರು.
ದೇಶದ ಅರ್ಥ ವ್ಯವಸ್ಥೆಯ ಗತಿ, ಚಿಂತನೆ ಬದಲಾಗಿದೆ. ಹೊಸ ರೀತಿಯ ಆದಾಯ ಹೊಂದುತ್ತಿರುವ ವರ್ಗದವರು ಸೃಷ್ಟಿಯಾಗಿದ್ದಾರೆ. ಅದಕ್ಕೆ ಪೂರಕವಾಗಿ ಉಂಟಾಗುವ ವಿವಾದಗಳ ಪರಿಹಾರಕ್ಕೆ ಹಾಲಿ ಇರುವ ಆದಾಯ ತೆರಿಗೆ ಕಾನೂನುಗಳು ಸಾಕಾಗುವುದಿಲ್ಲ. ಅದನ್ನು ಬದಲು ಮಾಡುವ ಮತ್ತೂಂದು ಸವಾಲಿನ ಕೆಲಸಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಕೈ ಹಾಕಿದೆ. ಹೀಗಾಗಿ ಆದಾಯ ತೆರಿಗೆಗೆ ಸಂಬಂಧಿಸಿದ ಹೊಸ ಕಾನೂನು ಹೇಗಿರಬೇಕು ಎಂದು ಪರಿಶೀಲನೆ ನಡೆಸಲು ಆರು ಮಂದಿ ಸದಸ್ಯರಿರುವ ಕಾರ್ಯ ಪಡೆಯೊಂದನ್ನು ರಚಿಸಲಾಗಿದೆ ಎಂದು ತಿಳಿಸಿದರು.
Comments