ವಿಧಾನಸಭೆ ಕಲಾಪದಲ್ಲಿ ಸಚಿವರ ಗೈರು ಹಾಜರಿ ಬಗ್ಗೆ ಬಿಜೆಪಿ–ಜೆಡಿಎಸ್ ಸದಸ್ಯರ ಆಕ್ರೋಶ

ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಸಚಿವರ ಗೈರು ಹಾಜರಿ ಕುರಿತು ಆಕ್ಷೇಪಿಸಿದರು. ಅದಕ್ಕೆ ಬಿಜೆಪಿಯ ಸಿ.ಟಿ. ರವಿ, ಡಿ.ಎನ್. ಜೀವರಾಜ್, ಅರವಿಂದ ಲಿಂಬಾವಳಿ, ಜೆಡಿಎಸ್‌ನ ವೈ.ಎಸ್.ವಿ. ದತ್ತ ದನಿಗೂಡಿಸಿದರು.
ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರುಗಳ ಹೆಸರನ್ನು ವಿಧಾಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಓದಿದರು. ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ, ಬಸವರಾಜ ರಾಯರಡ್ಡಿ, ತನ್ವೀರ್ ಸೇಠ್, ಎಚ್.ಎಂ. ರೇವಣ್ಣ, ವಿನಯ ಕುಲಕರ್ಣಿ, ಮಹದೇವಪ್ಪ, ಡಿ.ಕೆ. ಶಿವಕುಮಾರ್, ಕೃಷ್ಣ ಬೈರೇಗೌಡ, ಶರಣ ಪ್ರಕಾಶ ಪಾಟೀಲ, ಎ. ಮಂಜು, ರಮೇಶ ಜಾರಕಿಹೊಳಿ, ರುದ್ರಪ್ಪ ಲಮಾಣಿ ಹೆಸರುಗಳು ಪಟ್ಟಿಯಲ್ಲಿದ್ದವು. ಆದರೆ, ಈ ಪೈಕಿ ಎಚ್.ಕೆ. ಪಾಟೀಲ, ರಾಯರಡ್ಡಿ, ರೇವಣ್ಣ, ಕೃಷ್ಣ ಬೈರೇಗೌಡ ಮಾತ್ರ ಇದ್ದರು. 'ಸಚಿವರು ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಸಭಾಧ್ಯಕ್ಷರು ಸ್ಪಷನೆ ನೀಡಿದರು. ಆಗ ಮುಖ್ಯ ಸಚೇತಕ ಅಶೋಕ ಪಟ್ಟಣ,‘ಸಚಿವರಿಗೆ ಆರೋಗ್ಯ ಸರಿ ಇಲ್ಲ, ಆಸ್ಪತ್ರೆಗೆ ಹೋಗಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.
Comments