ಜೆಡಿಎಸ್ ನಾನು ಸಿಎಂ ಆಗುವುದನ್ನು ತಪ್ಪಿಸಿತ್ತು ಎಂಬ ಹೇಳಿಕೆಗೆ ಹೆಚ್.ಡಿ ದೇವೇಗೌಡ ತಿರುಗೇಟು

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಪ್ಪಿಸಿತ್ತು ಎಂದು ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ತಿರುಗೇಟು ನೀಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿರುವ ಹೆಚ್.ಡಿ ದೇವೇಗೌಡರು, ಸಿಎಂ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿಲ್ಲ, ರಾಮಕೃಷ್ಣ ಹೆಗೆಡೆ ಅವರನ್ನು ಸಿಎಂ ಮಾಡಿದ್ದು ನಾನು, ಸಿದ್ದರಾಮಯ್ಯ ಹೆಗಡೆಗಿಂತ ದೊಡ್ಡ ಲೀಡರ್ ಅಲ್ಲ, ಸಿದ್ದರಾಮಯ್ಯರನ್ನು ಉಪಮುಖ್ಯಮಂತ್ರಿಯನ್ನಾಗಿ ಬೆಳೆಸಿದ್ದು ಯಾರು? ದೇವೇಗೌಡನಿಗೆ ಜನರ ಶಕ್ತಿ , ಸಿದ್ದರಾಮಯ್ಯಗೆ ದುಡ್ಡು ಇದೆ, ಅಹಂಕಾರ ಇದೆ ಮಾತನಾಡಲಿ ಎಂದರು.ಸಿದ್ದರಾಮಯ್ಯ ಆಗುವುದನ್ನು ನಾನು ತಪ್ಪಿಸಿಲ್ಲ. ಈಗ ಬಳಿ ದುಡ್ಡು , ಅಹಂಕಾರವಿದೆ ಮಾತನಾಡುತ್ತಿದ್ದಾರೆ ಎಂದು ಹೆಚ್.ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
Comments