ನೈಸ್ ಯೋಜನೆ ಹೆಸರಲ್ಲಿ ಬಡ ರೈತರಿಗೆ ಅನ್ಯಾಯವಾಗಿದೆ ಎಂದು ಎಚ್ ಡಿಕೆ ಆರೋಪ

'ನೈಸ್ ಅಕ್ರಮಗಳ ಕುರಿತು ಕಳೆದ ಅಧಿವೇಶನದಲ್ಲಿಯೇ ವರದಿ ಮಂಡನೆಯಾಗಿದೆ, ಆದರೆ ಸರ್ಕಾರ ವರದಿಯನ್ನು ಜಾರಿ ಮಾಡದೆ ಕತ್ತಲೆ ಕೋಣೆಯಲ್ಲಿಟ್ಟಿದೆ' ಎಂದು ಸರ್ಕಾರದ ಮೇಲೆ ಎಚ್ಡಿಕೆ ಹರಿಹಾಯ್ದರು.
'ನೈಸ್ ಸಂಸ್ಥೆಯ ಪರ ಕೆಲವು ಪ್ರಮುಖ ಅಧಿಕಾರಿಗಳು ಕೆಲಸ ಮಾಡಿದ್ದಾರೆ, ನೈಸ್ ಗೆ ಅನುಕೂಲವಾಗುವಂತೆ ಅಧಿಕಾರಿಗಳು ದಾಖಲೆ ತಿದ್ದಿದ್ದಾರೆ, ಬಿಎಮ್ಐಸಿ ಸಂಸ್ಥೆಯಲ್ಲಿ ನಮ್ಮ ರಾಜ್ಯದ ಕೆಲವು ನಿವೃತ್ತ ಅಧಿಕಾರಿಗಳು ನಿರ್ದೇಶಕರಾಗಿದ್ದಾರೆ. ಅವರೆಲ್ಲಾ ಅಧಿಕಾರದಲ್ಲಿದ್ದಾಗ ನೈಸ್ ಅಕ್ರಮಕ್ಕೆ ಸಹಾಯ ಮಾಡಿದ್ದಾರೆ. ಅವರ ಮೇಲೆಯೂ ಕ್ರಮ ಜರುಗಿಸಿಲ್ಲ' ಎಂದು ಅವರು ಪ್ರಶ್ನೆ ಮಾಡಿದರು. ನೈಸ್ ಕಾರಿಡಾರ್ ಯೋಜನೆ ಪ್ರಾರಂಭವಾದಾಗಿನಿಂದಲೂ ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಅದನ್ನು ವಿರೋಧಿಸುತ್ತಲೆ ಬಂದಿದ್ದಾರೆ. ಈ ಕುರಿತು ಹಲವು ಪ್ರತಿಭಟನೆಗಳನ್ನೂ ಜೆಡಿಎಸ್ ಮಾಡಿತ್ತು. ಈ ಬಗ್ಗೆ ಯಾವುದೇ ಕ್ರಮ ಜರುಗುತ್ತಿಲ್ಲವೆಂದು ಎಚ್ ಡಿಕೆ ಸರ್ಕಾರಕ್ಕೆ ಪ್ರಶ್ನಿಸಿದರು.
Comments