ಅಟ್ಟಹಾಸ ಮೆರೆದ ಮಗನ ಬಗ್ಗೆ ಶಾಸಕ ಮಹೇಶ್ ಏನ್ ಹೇಳಿದ್ರು ?
ಮಕ್ಕಳು ಮಾಡೋ ತಪ್ಪುಗಳನ್ನ ಸಮರ್ಥಿಸಿಕೊಳ್ಳೋ ಈ ಕಾಲದಲ್ಲಿ ಶಾಸಕ ಸಾ.ರಾ.ಮಹೇಶ ಒಬ್ಬ ತಂದೆಯಾಗಿ ತಮ್ಮ ಜವಾಬ್ಧಾರಿ ಮೆರೆದಿದ್ದಾರೆ. ಮಗ ಇರಲಿ, ಮೊಮ್ಮಗ ಇರಲಿ, ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗ್ಬೇಕು ಅಂತಾ ಹೇಳುವ ಮೂಲಕ ಸಾ.ರಾ. ಮಹೇಶ್ ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗಿದ್ದಾರೆ.
ಜಯಂತ್ ಮತ್ತು ತಂಡದಿಂದ ಥಳಿತಕ್ಕೊಳಗಾದ ಯುವಕ ಚಿನ್ನದ ಸರ ಕಳವು ಮಾಡಿದ್ದ ಎನ್ನಲಾಗಿದ್ದು, ಇದಕ್ಕಾಗಿ ಈ ರೀತಿ ಗೂಂಡಾವರ್ತನೆ ತೋರಲಾಗಿದೆ ಎಂದು ಹೇಳಲಾಗಿದೆ. ಜಯಂತ್ ಮತ್ತು ಗುಂಪಿನಿಂದ ಥಳಿತಕ್ಕೆ ಒಳಗಾದ ಯುವಕ ಪರಿ ಪರಿಯಾಗಿ ಬೇಡಿಕೊಂಡರೂ ಬಿಟ್ಟಿಲ್ಲ. ಈ ಸಂಬಂಧ ದೇವರಾಜ ಠಾಣೆ ಪೊಲೀಸರು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿದ್ದರು ಎನ್ನಲಾಗಿದೆ.
Comments