ಅಧಿವೇಶನದಲ್ಲಿ ಇಂದು ಮಹದಾಯಿ ಕುರಿತು ಚರ್ಚೆ, ಗದ್ದಲಗಳಾಗುವ ಸಾಧ್ಯತೆ

22 Nov 2017 9:54 AM | Politics
403 Report

ಬೆಳಗಾವಿ: ಚಳಿಗಾಲದ ಅಧಿವೇಶನದ 8ನೇ ದಿನವಾದ ಇಂದು ಬಿಸಿ ಬಿಸಿ ಚರ್ಚೆ ನಡೆಯಲಿದೆ. ಕರ್ನಾಟಕದ ಕಳಸಾ ಬಂಡೂರಿ, ಮಹದಾಯಿ ಯೋಜನೆ, ಉತ್ತರಕರ್ನಾಟಕದ ಕೆಲ ವಿಚಾರಗಳ ಕುರಿತು ಸದನದಲ್ಲಿ ಇವತ್ತು ಗದ್ದಲಗಳಾಗುವ ಸಾಧ್ಯತೆ ಹೆಚ್ಚಿದೆ.

 ಚಳಿಗಾಲದ ಅಧಿವೇಶನದ ಏಳನೇ ದಿನವಾದ ನಿನ್ನೆ ಸರ್ಕಾರದ ವಿಧೇಯಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ ಮಂಡನೆ ಯಾಗಿದೆ. ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧೇಯಕವನ್ನು ಮಂಡಿಸಿದ್ದಾರೆ.

ಶೋಭಾ ಕರಂದ್ಲಾಜೆ ಅವರು ಇಂಧನ ಸಚಿವೆಯಾಗಿದ್ದಾಗ ಇಂಧನ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ, ಶೋಭಾ ಅವರ ತಪ್ಪಿನಿಂದ ಸರ್ಕಾರದ ಬೊಕ್ಕಸಕ್ಕೆ 1,590ಕೋಟಿ ನಷ್ಟವಾಗಿದೆ ಎಂದು ಇಂಧನ ಸದನ ಸಮಿತಿ ವರದಿ ಸಲ್ಲಿಸಿದೆ. ಈ ವಿಷಯ ಕೂಡ ಇಂದು ಸದನದಲ್ಲಿ ಗದ್ದಲಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯಲ್ಲಿನ ಜೈಲು ಶಿಕ್ಷೆ ಅಂಶವನ್ನು ತೆಗೆದು ಹಾಕುವ ಮೂಲಕ ಸರ್ಕಾರ ಖಾಸಗಿ ಆಸ್ಪತ್ರೆ ವೈದ್ಯರ ಒತ್ತಡಕ್ಕೆ ಮಣಿದಿದೆ. ಉಳಿದಂತೆ ಚಿಕಿತ್ಸೆ ದರದ ಪಟ್ಟಿ ಹಾಕುವುದು, ಕುಂದು ಕೊರತೆಗಳ ಸಮಿತಿ ರಚನೆ ಅಂಶ ಕಾಯ್ದೆಯಲ್ಲಿದೆ. ಈ ಬಗ್ಗೆ ಎರಡು ಸದನಗಳಲ್ಲಿ ವಿಸ್ತೃತ ಚರ್ಚೆಯಾಗಿದೆ. ಬಳಿಕ ಕಾಯ್ದೆಗಾಗಿ ಹೊರಹೊಮ್ಮಬೇಕಿದೆ. ವಿಪಕ್ಷಗಳು ಕೆಲ ಅಂಶಗಳ ಸೇರ್ಪಡೆಗೆ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಿದೆ.

 

 

Edited By

Hema Latha

Reported By

Sudha Ujja

Comments