ನೈಸ್ ವಿರುದ್ಧದ ಕ್ರಮಕ್ಕೆ ಎಚ್ ಡಿ ದೇವೇಗೌಡರ ಆಗ್ರಹ
ನೈಸ್ ಅಕ್ರಮ ಮುಚ್ಚಿ ಹಾಕಲು ಸರ್ಕಾರ ಯತ್ನ ನಡೆಸುತ್ತಿರುವ ಬಗ್ಗೆ ಸದನದಲ್ಲಿ ಸಚಿವರ ವಿರುದ್ಧ ಜೆಡಿಎಸ್ ಮುಖಂಡರು ಕೆಂಡಾಮಂಡಲವಾದರು. ಇಂದು ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪಿಸಲಾಯಿಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿ ದೇವೇಗೌಡರು ಸಿಎಂ ಮನಸ್ಸು ಮಾಡಿದರೆ ಕ್ರಮ ಕೈಗೊಳ್ಳುವುದು ದೊಡ್ಡ ಮಾತೇ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕುಂಟಿಯಾ. ನೈಸ್ ಸಂಸ್ಥೆಯಿಂದ ನಿರಂತರವಾಗಿ ಅಕ್ರಮಗಳು ನಡೆಯುತ್ತಲೇ ಇವೆ . ನೈಸ್ ಅಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ಗೆ ಕುಂಟಿಯಾರಿಂದ ಅಫಿಡವಿಟ್ .ನೈಸ್ ರಸ್ತೆಯಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹಣೆ ಮಾಡಲಾಗುತ್ತಿದೆ. ಹಣದ ಒತ್ತಡಕ್ಕೆ ಸಿಕ್ಕಿದ್ದರೋ , ಪಕ್ಷದ ಒತ್ತಡವೋ ಗೊತ್ತಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ರವರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments