ಸಿಎಂ ಬರ್ತಾರೆ ಅಂತಾ ಆಂಬುಲೆನ್ಸ್ ನಲ್ಲಿದ್ದ ರೋಗಿಯನ್ನು ಕೆಳಗಿಳಿಸಿ ಅಮಾನವೀಯ ಘಟನೆ

ಮಂಡ್ಯ ಜಿಲ್ಲೆ ನಾಗಮಂಗಲದ ಅಭಿವೃದ್ದಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಿದ್ದರು. ಈ ವೇಳೆ ನಾಗಮಂಗಲದ ಸ್ಟೇಡಿಯಂನಲ್ಲಿ ಹೆಲಿಕಾಪ್ಟರ್ ನಲ್ಲಿ ಇಳಿದು ಎದುರಿನ ಸ್ಟೇಜ್‌ಗೆ ಹೋಗುವಾಗ ಈ ಮಧ್ಯೆ ರಸ್ತೆಯಲ್ಲಿ ಬರುತ್ತಿದ್ದ ಆ್ಯಂಬುಲೆನ್ಸ್‌ನ್ನು ತಡೆದಿದ್ದಾರೆ.
ಸುಮ್ಮನೆ ತಡೆದಿದ್ದರೆ ಏನಾಗುತ್ತಿರಲಿಲ್ಲ ಬದಲಾಗಿ ಆಂಬುಲೆನ್ಸ್ನಲ್ಲಿದ್ದ ಮಹಿಳಾ ರೋಗಿಯನ್ನು ಕೆಳಗೆ ಇಳಿಸಿ, ನಡೆಸಿ ಕಳುಹಿಸಿದ್ದಾರೆ. ಸಿಎಂ ಭದ್ರತೆ ಹೆಸರಲ್ಲಿ ಪೋಲಿಸರು, ಹಳ್ಳಿಯಿಂದ ಮಹಿಳಾ ರೋಗಿಯನ್ನು ಕರೆ ತರುತ್ತಿದ್ದ ಆ್ಯಂಬುಲೆನ್ಸ್ನ್ನು ಅರ್ಧಕ್ಕೆ ತಡೆದಿದ್ದಾರೆ. ಭದ್ರತೆ ಹೆಸರಲ್ಲಿ ರೋಗಿಯನ್ನು ತಡೆದಿದ್ದರಿಂದ ಮಹಿಳೆಯನ್ನು ನಡೆಸಿಕೊಂಡೇ ಕರೆದುಕೊಂಡು ಹೋಗಿದ್ದಾರೆ.
ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮಹಿಳೆಯನ್ನು ನೋಡಿ ಮರುಗಿದ ಜನ, ಇಂತಹ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳೇ ಪೊಲೀಸರಿಗೆ ತಿಳಿ ಹೇಳಬೇಕು. ವೇದಿಕೆ ಮೇಲೆ ಅಭಿವೃದ್ಧಿ ಬಗ್ಗೆ ಮಾತನಾಡುವಾಗ ಇಂತಹ ಮಾನವೀಯತೆ ವಿಷಯಗಳ ಬಗ್ಗೆ ಸಿಎಂ ಪಾಠ ಮಾಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Comments