ಮೋದಿಯವರ ವಿರುದ್ಧ ಮಾತನಾಡುವ ಧೈರ್ಯ ತೋರಬೇಡಿ : ನಿತ್ಯಾನಂದ ರೈ

ಯಾರಾದರೂ ಮೋದಿಯವರ ವಿರುದ್ಧ ಬೊಟ್ಟುಮಾಡಿದರೆ ಅಂಥವರ ಬೆರಳು ಕತ್ತರಿಸುತ್ತೇನೆ" ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಬಿಹಾರ ಬಿಜೆಪಿ ಮುಖಂಡ ನಿತ್ಯಾನಂದ ರೈ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪ್ರಧಾನಿ ಮೋದಿ ಅವರು ಅನೇಕಾನೇಕ ಎಡರು ತೊಡರುಗಳನ್ನು ದಾಟಿ ದೇಶವನ್ನು ಸಮರ್ಥವಾಗಿ ಸಮಗ್ರ ಪ್ರತಿಯೆಡೆಗೆ ಮುನ್ನಡೆಸುತ್ತಿರುವುದು ಯಾರಿಗೇ ಆದರೂ ಹೆಮ್ಮೆಯ ವಿಷಯವಾಗಿದೆ ಎಂದು ರಾಯ್ ಹೇಳಿದರು. ಸಂಸದ ನಿತ್ಯಾನಂದ ರಾಯ್ ಅವರು ನಿನ್ನೆ ಸೋಮವಾರ ವೈಶ್ಯ ಮತ್ತು ಕನೂ ಸಮುದಾಯದವರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅತ್ಯಂತ ಬಡ ಕುಟುಂಬದಿಂದ ಬಂದ ಹೊರತಾಗಿಯೂ ನರೇಂದ್ರ ಮೋದಿ ಅವರು ಇಂದು ದೇಶದ ಪ್ರಧಾನಿಯಾಗಿದ್ದಾರೆ. ಯಾವುದೇ ಬಗೆಯ ಭಿನ್ನಮತ ಇರುವ ವ್ಯಕ್ತಿಗಳು ಕೂಡ ದೇಶದ ಉನ್ನತಿಗಾಗಿ ಮೋದಿ ನಡೆಸುತ್ತಿರುವ ಪರಿಶ್ರಮವನ್ನು ಮೆಚ್ಚಿ ಬೆಂಬಲಿಸಬೇಕು. ಅಂತಿರುವಾಗ ಮೋದಿ ಅವರನ್ನು ಅವಹೇಳನ ಮಾಡಲು ಅವರತ್ತ ಕೈ ಅಥವಾ ಬೆರಳು ತೋರಿಸುವ ವ್ಯಕ್ತಿಗಳ ಕೈ ಅಥವಾ ಬೆರಳನ್ನು ಮುರಿದು ಹಾಕಲು ನಾವೆಲ್ಲ ಜತೆಗೂಡಬೇಕು; ಒಂದೊಮ್ಮೆ ಅದನ್ನು ಕತ್ತರಿಸಿ ಹಾಕುವ ಪ್ರಮೇಯ ಬಂದರೂ ಸರಿಯೇ' ಎಂದು ನಿತ್ಯಾನಂದ ರಾಯ್ ಹೇಳಿದರು.
Comments