ರೆಸ್ಟೋರೆಂಟ್ ನಲ್ಲಿ ಜೆಡಿಎಸ್ ಮುಖಂಡರ ಮೋಜು ಮಸ್ತಿ

20 Nov 2017 5:56 PM | Politics
559 Report

ಚನ್ನಪಟ್ಟಣ ಮಾಜಿ ಶಾಸಕ M.C.ಅಶ್ವಥ್, ತಮ್ಮ M.C.ಕರಿಯಪ್ಪ ಅವರು ಆಯೋಜಿಸಿದ್ದ ಪಾರ್ಟಿಯಲ್ಲಿ ಜೆಡಿಎಸ್​ ಕಾರ್ಯಕರ್ತರು ಕಂಠಪೂರ್ತಿ ಕುಡಿದು ಕುಪ್ಪಳಿಸಿದ್ದಾರೆ. ಕಾರ್ಯಕರ್ತರು ಡ್ಯಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಖಾಸಗಿ ರೆಸ್ಟೋರೆಂಟ್‌ನಲ್ಲಿ ಇಂದು ಸೋಮವಾರ ಜೆಡಿಎಸ್ ಮುಖಂಡರು ಮೋಜು ಮಸ್ತಿ ಮಾಡಿ, ಕುಣಿದು ಕುಪ್ಪಳಿಸಿದ್ದಾರೆ. ಮದ್ಯದ ಗ್ಲಾಸ್​ ತಲೆಮೇಲಿಟ್ಟುಕೊಂಡು ಜೆಡಿಎಸ್​ ಕಾರ್ಯಕರ್ತರು ಡ್ಯಾನ್ಸ್ ಮಾಡಿದ್ದಾರೆ. ಚನ್ನಪಟ್ಟಣ ಖಾಸಗಿ ರೆಸ್ಟೋರೆಂಟ್​ನಲ್ಲಿ ಗುಂಡು ಪಾರ್ಟಿ ಆಯೋಜಿಸಿ ಸಖತ್ ಮಜಾ ಮಾಡಿದ್ದಾರೆ. ಅಂದಹಾಗೆ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಸಾಂಗ್​ಗೆ ಜೆಡಿಎಸ್​ ಕಾರ್ಯಕರ್ತರು ಮಸ್ತ್​ ಸ್ಟೆಪ್ಸ್​ ಹಾಕಿದ್ದಾರೆ. ಜನರ ಸಮಸ್ಯೆಗಳಿಗೆ ಕಿವಿಗೊಡಬೇಕಾದ ಜನಪ್ರತಿನಿಧಿಗಳು ಈ ರೀತಿ ಕುಣಿದು ಕುಪ್ಪಳಿಸಿರುವುದು ಭಾರಿ ಟೀಕೆಗೆ ಗುರಿಯಾಗಿದೆ.

Edited By

Shruthi G

Reported By

Madhu shree

Comments