ಟ್ವಿಟ್ಟರ್ ನಲ್ಲಿ ವಿಶ್ವ ಸುಂದರಿಗೆ ಅಭಿನಂದನೆ ಸಲ್ಲಿಸಿದ ರಾಹುಲ್

ಗುಜರಾತ್ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಿರುವ ರಾಹುಲ್ ಗಾಂಧಿ ಸಮಯ ಹೊಂದಿಸಿಕೊಂಡು ಟ್ವಿಟರ್ ನಲ್ಲಿ ಮಾನುಷಿಗೆ ಶುಭ ಕೋರಿದ್ದಾರೆ. ವಿಶ್ವ ಸುಂದರಿ 2017 ಮಾನುಷಿ ಛಿಲ್ಲರ್ ನಿಮಗೆ ಅಭಿನಂದನೆಗಳು. ನಿಮ್ಮ ಸಾಧನೆ ನೋಡಿ ಯುವ ಸಾಧಕರು ಹೆಮ್ಮಪಡುತ್ತಾರೆ. ಯುವ ಜನತೆಯ ಅದಮ್ಯ ಉತ್ಸಾಹದಲ್ಲಿ ನಮ್ಮ ದೇಶದ ಭವಿಷ್ಯ ಅಡಗಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ರಾಹುಲ್ ಟ್ವೀಟ್ ಗೆ ಖುಷಿಯಾದ ಮಾನುಷಿ ಧನ್ಯವಾದ ಹೇಳಿದ್ದಾರೆ. ಧನ್ಯವಾದ ಸರ್. ಭಾರತವನ್ನು ಪ್ರತಿನಿಧಿಸುವುದು ಪೂಜ್ಯ ಹಾಗೂ ಗೌರವಾನ್ವಿತ ಕೆಲಸ ಎಂದು ಮಾನುಷಿ ಹೇಳಿದ್ದಾರೆ. 17 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ ಸಿಕ್ಕಿದೆ. ಹರ್ಯಾಣದ ಮಾನುಷಿ ಛಿಲ್ಲರ್ ಮಿಸ್ ವರ್ಲ್ಡ್ ಆಗಿ ಹೊರ ಹೊಮ್ಮಿದ್ದಾರೆ. ಮಿಸ್ ವರ್ಲ್ಡ್ ಘೋಷಣೆಯಾಗ್ತಿದ್ದಂತೆ ಮಾನುಷಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಇದ್ರಲ್ಲಿ ಮುಂದಿನ ಕಾಂಗ್ರೆಸ್ ಭಾವಿ ಅಧ್ಯಕ್ಷ, ಹಾಲಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರೂ ಸೇರಿದೆ.
Comments