ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಜಿ.ಪರಮೇಶ್ವರ್
ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ , ಅನಂತಕುಮಾರ್ ಹೆಗಡೆ, ಕೆ.ಎಸ್.ಈಶ್ವರಪ್ಪನವರು ಸಾರ್ವಜನಿಕ ಬದುಕಿನಲ್ಲಿರುವುದಕ್ಕೆ ಲಾಯಕ್ಕಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹರಿಹಾಯ್ದಿದ್ದಾರೆ.
ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ 100ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಯಕರಾದ ನೀವೆಲ್ಲ ಆರ್ ಎಸ್‌ಎಸ್ ನಿಂದ ಕಲಿತ ಸಂಸ್ಕೃತಿ ಇದೇನಾ ಎಂದು ಪ್ರಶ್ನೆ ಮಾಡಿದರು. ಪಕ್ಷದ ಚಟುವಟಿಕೆ ಕುರಿತು ಮಾತನಾಡಿದ ಅವರು ಡಿಸೆಂಬರ್ ತಿಂಗಳಿನಿಂದ ಮತ್ತೆ 'ಮನೆ ಮನೆಗೆ ಕಾಂಗ್ರೆಸ್' ಕಾರ್ಯಕ್ರಮ ಮುಂದುವರೆಯಲಿದೆ. 'ಮನೆ ಮನೆಗೆ ಕಾಂಗ್ರೆಸ್' ಕಾರ್ಯಕ್ರಮದಲ್ಲಿ ಮಹಿಳಾ ಕಾರ್ಯಕರ್ತೆಯರಿಂದ ಇಂದಿರಾಗಾಂಧಿ ಫೋಟೊ ಇಟ್ಟು 100 ದೀಪಗಳನ್ನು ಹಚ್ಚುವ ಮೂಲಕ ಅವರಿಗೆ ನಮನ ಸಲ್ಲಿಸಲು ಸೂಚಿಸಲಾಗಿರುವುದಾಗಿಯೂ ಹೇಳಿದರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನ ತಂದುಕೊಟ್ಟವರು ಇಂದಿರಾಗಾಂಧಿಯಾಗಿದ್ದು, ಅವರ ಸ್ಮರಣೆಯನ್ನು ಮಾಡುವುದು ಅಗತ್ಯವಾಗಿದೆ ಎಂದರು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಯುವಕರಾಗಿದ್ದು ಅವರ ನೇತೃತ್ವದಲ್ಲಿ ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಆಡಳಿತಕ್ಕೆ ಬರುವುದು ಖಚಿತ ಎಂದು ಭವಿಷ್ಯ ನುಡಿದರು.
Comments