ಬಿಜೆಪಿಗೆ ಮಕ್ಕಳನ್ನು ಹೆರುವ ಶಕ್ತಿ ಇಲ್ಲ, ಕರ್ನಾಟಕ ಸಚಿವರ ಹೇಳಿಕೆ

19 Nov 2017 9:28 PM | Politics
311 Report

ಧಾರವಾಡ: ಸಚಿವ ವಿನಯ ಕುಲಕರ್ಣಿ ಅವರು ಸುದ್ದಿಗಾರರ ಜತೆ ಮಾತನಾಡಿದ್ದಾರೆ. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಬಿಜೆಪಿಗೆ ಮಕ್ಕಳನ್ನು ಹೆರುವ ಶಕ್ತಿಯೇ ಇಲ್ಲ ಎಂದರು,

ಧಾರವಾಡ: ಸಚಿವ ವಿನಯ ಕುಲಕರ್ಣಿ ಅವರು ಸುದ್ದಿಗಾರರ ಜತೆ ಮಾತನಾಡಿದ್ದಾರೆ. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಬಿಜೆಪಿಗೆ ಮಕ್ಕಳನ್ನು ಹೆರುವ ಶಕ್ತಿಯೇ ಇಲ್ಲ ಎಂದರು, ಕಾಂಗ್ರೆಸ್ ನಿಂದ ಪ್ರಭಾವಿ ನಾಯಕರನ್ನು ದತ್ತು ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದರು.

ಬಿಜೆಪಿಯು ಬ್ಲ್ಯಾಕ್ ಮೇಲ್ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ನಿಂದ ಪ್ರಭಾವಿಗಳನ್ನು ಹೆದರಿಸಲು ಐಟಿ ದಾಳಿಯ ದಾರಿ ಕಂಡು ಕೊಂಡಿದ್ದು, ಆದರೆ ಡಿ.ಕೆ ಶಿವಕುಮಾರ್ ಅವರಾಗಲಿ ಪ್ರಮೋದ್ ಮಧ್ವರಾಜ್ ಅವರಾಗಲಿ ಯಾವತ್ತೂ ಬಿಜೆಪಿಗೆ ಸೇರಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ವಿರುದ್ಧದ ಹೋರಾಟ ನಿರಂತರವಾಗಿದ್ದು, ಈ ಕುರಿತು ಸೌಹಾರ್ದ ಮಾತುಕತೆಗೆ ಪಂಚಪೀಠಾಧೀಶರಿಗೆ ಮನವಿ ಮಾಡಿದ್ದೇವೆ , ಶ್ರೀಗಳ ಬಗ್ಗೆ ನಮಗೆ ಗೌರವ ಇದೆ ಎಂದರು.

 

 

Edited By

Hema Latha

Reported By

Sudha Ujja

Comments