ಮುಖ್ಯಮಂತ್ರಿ ಸಿದ್ಧರಾಮಯ್ಯ ರವರಿಗೆ ರಾಷ್ಟ್ರಪತಿ ಯಾರು ಅಂತಾನೆ ಗೊತ್ತಿಲ್ವಾ?

ಸಿದ್ದರಾಮಯ್ಯ ಅವರಿಗೆ ನಮ್ಮ ದೇಶದ ರಾಷ್ಟ್ರಪತಿ ಯಾರೆಂಬುದೇ ಗೊತ್ತಿಲ್ಲ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ನಮ್ಮ ದೇಶದ ರಾಷ್ಟ್ರಾಧ್ಯಕ್ಷರು ಯಾರು ಎಂಬುದನ್ನೇ ಮರೆತಿದ್ದಾರೆ. ಇಷ್ಟೇ ಅಲ್ಲದೆ ಅವರು ನಮ್ಮ ರಾಷ್ಟ್ರಾಧ್ಯಕ್ಷರು ಯಾರು ಎಂದು ವೇದಿಕೆಯಲ್ಲಿದ್ದವರ ಬಳಿ ಕೇಳಿದ್ದಾರೆ.
ನಮ್ಮ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಮ್ಮ ರಾಷ್ಟ್ರಪತಿ ಯಾರೆಂಬುದೇ ಗೊತ್ತಿಲ್ಲ. ವೇದಿಕೆಯಲ್ಲಿದ್ದವರು ರಾಷ್ಟ್ರಪತಿಗಳ ಹೆಸರು ಹೇಳಿದರೂ ಸಹ ಅದನ್ನು ಸರಿಯಾಗಿ ಗ್ರಹಿಸದ ಮುಖ್ಯಮಂತ್ರಿ ರಾಮನಾಥ್ ಗೋವಿಂದ ಅಲ್ಲ ಕೋವಿಂದ ಎಂದು ರಾಷ್ಟ್ರಪತಿಗಳ ಹೆಸರನ್ನು ಉಚ್ಛರಿಸಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿಗೆ ನಮ್ಮ ದೇಶದ ರಾಷ್ಟ್ರಾಧ್ಯಕ್ಷರು ಯಾರು ಎಂಬುದೇ ಗೊತ್ತಿಲ್ಲ ಅವರ ಹೆಸರನ್ನೂ ಸಹ ಬೇರೆಯವರ ಬಳಿ ಕೇಳುತ್ತಿದ್ದಾರೆ ಎಂದು ಸಾರ್ವಜನಿಕರು ಸಿದ್ದರಾಮಯ್ಯ ಅವರ ನಡೆಯನ್ನು ಟೀಕಿಸಿದ್ದಾರೆ.
Comments