ಖ್ಯಾತ ನಟ ರಾಹುಲ್ ರಾಯ್ ಬಿಜೆಪಿಯತ್ತ ಮುಖ

"ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅವರ ಆಡಳಿತದಲ್ಲಿ ದೇಶವು ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಇದು ನನ್ನ ಜೀವನದ ಮಹತ್ವದ ದಿನ. ಮೋದಿ ತಮ್ಮ ಸಾರಥ್ಯದಲ್ಲಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ." ರಾಯ್ ನುಡಿದರು.
ಆಶಿಕಿ' ಖ್ಯಾತಿಯ ನಟ ರಾಹುಲ್ ರಾಯ್ ಇಂದು ಕೇಂದ್ರ ಸಚಿವ ವಿಜಯ್ ಗೋಯಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂದರು. ಬಿಜೆಪಿ ಸೇರ್ಪಡೆ ಬಳಿಕ ರಾಯ್ "ಇದು ನನ್ನ ಜೀವನದಲ್ಲಿ ಮಹತ್ವದ ದಿನ" ಎಂದರು. 1990ರಲ್ಲಿ ತೆರೆಕಂಡ ಆಶಿಕಿ ಚಿತ್ರದಲ್ಲಿ ರಾಯ್ ಅಭಿನಯಿಸಿದ್ದ ಚಾಕೋಲೇಟ್ ಬಾಯ್ ಪಾತ್ರ ಯುವಜನತೆಯನ್ನು ಮೋಡಿ ಮಾಡಿತ್ತು. ಇದಲ್ಲದೆ ಅವರು 2007ರಲ್ಲಿ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ವಿಜೇತರಾಗಿದ್ದರು.
Comments