ಮೌಢ್ಯ ನಿಷೇಧ ಕಾಯ್ದೆಗೆ ಒತ್ತು ನೀಡ್ತಿದ್ರೆ ಮತ್ತೊಂದೆಡೆ ಜಾರಿಗೆ ತರಲು ಸಿದ್ಧತೆ
ಒಂದು ಕಡೆ ಮೌಢ್ಯ ನಿಷೇಧ ಕಾಯ್ದೆಗೆ ಒತ್ತು ನೀಡಿರುವ ರಾಜ್ಯ ಸರ್ಕಾರ ಅದನ್ನು ಜಾರಿಗೆ ತರಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದರೆ ಇತ್ತ ಕಾಂಗ್ರೆಸ್ ಅಧಿಕಾರದಲ್ಲಿರುವ ವಿಜಯಪುರ ಜಿಲ್ಲಾ ಪಂಚಾಯಿತಿ ಸರ್ಕಾರವನ್ನು ಮುಜುಗರಕ್ಕೀಡು ಮಾಡುವಂತಹ ಕೆಲಸ ಮಾಡಿದೆ.
ಜಿಲ್ಲಾ ಪಂಚಾಯಿತಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ. ಕಾರಣ ಏನೆಂದರೆ… ಚಟ್ಟಿ ಅಮವಾಸ್ಯೆ ಇರುವುದರಿಂದ ನಿಗದಿಯಾದ ಸಭೆಯನ್ನು ರದ್ದುಗೊಳಿಸಿರುವುದು ಸರ್ಕಾರವೇ ಮೌಢ್ಯಕ್ಕೆ ಜೋತು ಬಿತ್ತಾ ಎನ್ನುವಂತಿದೆ. ಎಲ್ಲ ಸದಸ್ಯರು ಒತ್ತಡ ಹಾಕಿದ್ದಕ್ಕೆ ಅಧ್ಯಕ್ಷರು ಸಭೆಯನ್ನು ನವೆಂಬರ್ 28ಕ್ಕೆ ನಿಗದಿ ಮಾಡಿರುವುದು ಸರ್ಕಾರದ ಮೌಢ್ಯ ನಿಷೇಧ ಕಾಯ್ದೆಗೆ ಹಿನ್ನೆಡೆಯಾದಂತಿದೆ.
Comments