ಜೆಡಿಎಸ್ ಬಂಡಾಯ ಶಾಸಕ ಬಾಲಕೃಷ್ಣ ಗೆ ಶುರುವಾಗಿದೆ ವಿಧಾನಸಭಾ ಚುನಾವಣೆಯ ಭಯ
ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ಗೆ ಮುಂಬರುವ ವಿಧಾನಸಭೆ ಚುನಾವಣೆಯ ನಡುಕ ಶುರುವಾಗಿದೆ. ಇದಕ್ಕೆ ಕಾರಣ ತಮ್ಮ ವಿರುದ್ಧ ಮಾಗಡಿಯಲ್ಲಿ ಹೊಸ ಅಭ್ಯರ್ಥಿಯನ್ನು ದೇವೇಗೌಡರು ಮುಂದಾಗಿರುವ ಹಿನ್ನಲೆಯಲ್ಲಿ ಬಾಲಕೃಷ್ಣ ಶತ್ರು ಸಂಹಾರ ಯಾಗ ನಡೆಸಿದ್ದಾರೆ ಎನ್ನಲಾಗಿದೆ.
ಹೌದು, ಶಾಸಕ ಬಾಲಕೃಷ್ಣ ಅವರು ಕೇರಳಕ್ಕೆ ತೆರಳಿ ದೇವೇಗೌಡರ ವಿರುದ್ಧವೇ ಶತ್ರು ಸಂಹಾರ ಯಾಗ ನಡೆಸಿದ್ದಾರೆ ಎನ್ನುವ ವಿಷಯವೊಂದು ಹರಿದಾಡುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಫೋಟೋಗಳು ವೈರಲ್ ಆಗಿದೆ. ಕೇರಳದ ಕಣ್ಣೀರಿನ ಭಗವತಿ ಹಾಗು ರಾಜೇಶ್ವರಿ ದೇವಾಲಯದಲ್ಲಿ ಪೂಜೆ ಮತ್ತು ಯಾಗ ನಡೆಸಿದ್ದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Comments