ಅಂಬರೀಷ್ ಜೆಡಿಎಸ್‌ಗೆ ಬಂದರೆ ಲಾಭಕ್ಕಿಂತ ನಷ್ಟವಾಗುತ್ತದೆ : ಡಿ.ರಮೇಶ್

‘ಕ್ಷೇತ್ರದಲ್ಲಿ ಅಂಬರೀಷ್ ಮೇಲೆ ಜನಾಕ್ರೋಶವಿದೆ. ಜೆಡಿಎಸ್‌ಗೆ ಬಂದರೆ ಲಾಭಕ್ಕಿಂತ ನಷ್ಟವಾಗುತ್ತದೆ. ಹತ್ತಾರು ವರ್ಷಗಳಿಂದ ಜೆಡಿಎಸ್‌ಗೆ ಮಣ್ಣು ಹೊತ್ತಿರುವ 15ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಂಬರೀಷ್ ಅವಶ್ಯಕತೆ ಇಲ್ಲ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ತಿಳಿಸಿದರು.
ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಮುಂದೆ ಅಂತಹ ಯಾವುದೇ ಪ್ರಸ್ತಾವ ಇಲ್ಲ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ತಿಳಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಎಐಸಿಸಿ ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆ ರಮ್ಯಾ ಅಭ್ಯರ್ಥಿ
ಯಾಗಲಿದ್ದಾರೆ. ಅಂಬರೀಷ್ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಲಿದ್ದಾರೆ. ಈ ಇಬ್ಬರ ನಡುವೆ ಹಣಾಹಣಿ ನಡೆಯಲಿದೆ ಎಂದು ಜಿಲ್ಲೆಯಾದ್ಯಂತ ಸುದ್ದಿ ಹರಡಿದೆ. ಹೀಗಾಗಿ ಜಿಲ್ಲೆಯ ಜೆಡಿಎಸ್ ಮುಖಂಡರು ಅಂಬರೀಷ್ ಜೆಡಿಎಸ್ ಸೇರುವ ಪ್ರಸ್ತಾವವನ್ನು ನಿರಾಕರಿಸಿದ್ದಾರೆ. ಅವರು ಜೆಡಿಎಸ್ ಸೇರುತ್ತಾರೆ ಎಂಬ ಗಾಳಿಸುದ್ದಿಯನ್ನು ಕಾಂಗ್ರೆಸ್‌ನ ಕೆಲವರು ಹಬ್ಬಿಸಿದ್ದಾರೆ. ಅಂಬರೀಷ್ ಮತ್ತು ರಮ್ಯಾ ನಡುವೆ ಸ್ಪರ್ಧೆ ನಡೆಯಲಿದೆ ಎಂಬ ಎಂಬ ವದಂತಿಯನ್ನು ಅವರೇ ಹಬ್ಬಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments