ಜೆಡಿಎಸ್ ಮುಖಂಡನನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಎಂ.ಟಿ ಕೃಷ್ಣಪ್ಪ

ತುಮಕೂರು ಜಿಲ್ಲೆ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಜೆಡಿಎಸ್ ಮುಖಂಡನಿಗೆ ಅವಾಚ್ಯವಾಗಿ ಬಯ್ಯುವ ಮೂಲಕ ಮತ್ತೊಮ್ಮೆ ತಮ್ಮ ನಾಲಿಗೆ ಹರಿ ಬಿಟ್ಟಿದ್ದಾರೆ. ಜೆಡಿಎಸ್ ಮುಖಂಡ ನಾರಾಯಣ ಗೌಡರ ಉಚಿತ ಆಂಬುಲೆನ್ಸ್ ಸೇವೆಯ ಬ್ಯಾನರನ್ನು ಕಟ್ಟುತ್ತಿದ್ದ ಬಾಲಕನಿಗೆ ಶಾಸಕ ಎಂ ಟಿ ಕೃಷ್ಣಪ್ಪ ಹೆದರಿಸಿ ಕಳುಹಿಸಿದ್ದಾರೆ.
ಶಾಸಕರ ಈ ದೌರ್ಜನ್ಯವನ್ನು ಜೆಡಿಎಸ್ ನ ಇನ್ನೋರ್ವ ಮುಖಂಡ ನಾಗಲಾಪುರ ಮಂಜುನಾಥ್ ಫೋನ್ ಮಾಡಿ ಪ್ರಶ್ನಿಸಿದ್ದಾರೆ. ಈ ವೇಳೆ ಕೆಂಡಾಮಂಡಲವಾದ ಶಾಸಕ ಎಂ ಟಿ ಕೃಷ್ಣಪ್ಪ ನಳಿಗೆ ಹರಿ ಬಿಟ್ಟಿದ್ದಾರೆ. ಅಲ್ಲದೆ ಇದು ನನ್ನ ಕ್ಷೇತ್ರ ಬೇರೆ ಎಲ್ಲಿಂದನೋ ಬಂದು ಯಾರು ಮೆರೆಬಾರದು ಅಂತ ಧಮ್ಕಿ ಹಾಕಿದ್ದಾರೆ ಎಂದು ನಾಗಲಾಪುರ ಮಂಜುನಾಥ್ ಆರೋಪಿಸಿದ್ದಾರೆ. ಇನ್ನೊಂದೆಡೆ ಬ್ಯಾನರ್ ಅಂಟಿಸುತ್ತಿದ್ದ ಬಾಲಕ ಜಾಫರ್ ಎಂಬುವವನಿಗೆ ಶಾಸಕರ ಆಪ್ತ ರಾಘು ಹಿಗ್ಗಾಮುಗ್ಗಾ ತಾಳಿಸಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
Comments