ದೆಹಲಿ ಸರ್ಕಾರ ನಾಗರೀಕರಿಗೆ ನೂತನ ಯೋಜನೆಗಳನ್ನು ಜಾರಿಗೆ ತರಲಿದೆ

ಖಾಸಗಿ ಸಂಸ್ಥೆ ಕಾಲ್ ಸೆಂಟರ್'ಗಳನ್ನು ತೆರೆಯಲಿದ್ದು, ಸಹಾಯಕರನ್ನು ನೇಮಿಸಲಿದೆ. ಒಂದು ವೇಳೆ ವ್ಯಕ್ತಿಯೊಬ್ಬ ಚಾಲನಾ ಪರವಾನಗಿ ಮಾಡಿಸಿಕೊಳ್ಳಬೇಕಾಗಿದ್ದರೆ ಕಾಲ್ ಸೆಂಟರ್'ಗೆ ಫೋನ್ ಮಾಡಿ ಮಾಹಿತಿ ನೀಡಿದರೆ ಸಾಕು. ಬಳಿಕ ಸಂಚಾರಿ ಸಹಾಯಕರು ಅರ್ಜಿದಾರರ ಮನೆಗೆ ತೆರಳಿ ಅಗತ್ಯವಿರುವ ದಾಖಲೆ ಪಡೆದುಕೊಳ್ಳಲಿದ್ದಾರೆ.
ಆದರೆ, ವಾಹನ ಚಾಲನೆಯ ಪರೀಕ್ಷೆಗಾಗಿ ಅರ್ಜಿದಾರರು ಒಮ್ಮೆ ಎಂಎಲ್'ಒ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಸಹಾಯಕರಿಗೆ ಬಯೋಮೆಟ್ರಿಕ್ ಉಪಕರಣ, ಕ್ಯಾಮೆರಾ ನೀಡಲಾಗುತ್ತದೆ. ಜಾತಿ ಪ್ರಮಾಣಪತ್ರ, ಚಾಲನಾ ಪರವಾನಗಿ, ನೀರಿನ ಸಂಪರ್ಕ ಸೇರಿದಂತೆ 40 ಸಾರ್ವಜನಿಕ ಸೇವೆಗಳನ್ನು ಪಡೆಯಲು ಜನರು ಸರ್ಕಾರಿ ಕಚೇರಿಯ ಮುಂದೆ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಅವುಗಳನ್ನು ನಾಗರಿಕರ ಮನೆ ಬಾಗಿಲಿಗೇ ಒದಗಿಸುವ ನೂತನ ಯೋಜನೆಯೊಂದನ್ನು ದೆಹಲಿ ಸರ್ಕಾರ ಜಾರಿಗೆ ತರಲಿದೆ. ಮೊದಲ ಹಂತದಲ್ಲಿ ಈ ಯೋಜನೆಗೆ 8 ಸಾರ್ವಜನಿಕ ಸೇವಾ ಇಲಾಖೆಗಳನ್ನು ಆಯ್ಕೆ ಮಾಡಲಾಗಿದೆ.
Comments