ಮೌಢ್ಯ ನಿಷೇಧ ಮಸೂದೆ ತಿದ್ದುಪಡಿಗಳೊಂದಿಗೆ ಅನುಮೋದನೆ ಜಾರಿ

ವಶೀಕರಣ ಹೆಸರಿನಲ್ಲಿ ಮರಳು ಮಾಡುವ ಜಾಹೀರಾತು ನೀಡುವುದನ್ನು ನಿಷೇಧಿಸಲು ಮತ್ತು ಮಾಧ್ವ ಸಂಪ್ರದಾಯದ ಪ್ರಕಾರ ಮುದ್ರೆ ಹಾಕುವ ಪದ್ಧತಿಗೆ ಅವಕಾಶ ಕಲ್ಪಿಸಲು ಒಪ್ಪಿಗೆ ನೀಡಲಾಯಿತು. ಎಲ್ಲ ಧರ್ಮ, ಜಾತಿಯವರಿಗೆ ಈ ಮಸೂದೆ ಅನ್ವಯ ಆಗಲಿದೆ ಎಂದೂ ಸೇರಿಸಿಕೊಳ್ಳಲು ತೀರ್ಮಾನಿಲಾಯಿತು.
ಎಂಜಲು ಎಲೆಯ ಮೇಲೆ ಉರುಳಾಟ, ಸಿಡಿ, ಬೆತ್ತಲೆ ಸೇವೆ, ಋತುಮತಿ ಅಥವಾ ಗರ್ಭಿಣಿಯನ್ನು ಊರಿನಿಂದ ಹೊರಗಿಡುವುದು ಸೇರಿದಂತೆ ಅನೇಕ ಆಚರಣೆಗಳನ್ನು ನಿರ್ಬಂಧಿಸುವ ಮೌಢ್ಯ ನಿಷೇಧ ಮಸೂದೆಯನ್ನು ಕೆಲವು ತಿದ್ದುಪಡಿಗಳೊಂದಿಗೆ ಅನುಮೋದನೆ ನೀಡಿತು. ಜ್ಯೋತಿಷ ಮತ್ತು ವಾಸ್ತು ನಿಷೇಧಿಸಬೇಕು ಎಂದು ಶಾಸಕ ಬಿ.ಆರ್. ಪಾಟೀಲ ಆಗ್ರಹಿಸಿದರು. ಆದರೆ, ಅದಕ್ಕೆ ಮನ್ನಣೆ ಸಿಗಲಿಲ್ಲ. ಆರಂಭದಲ್ಲಿ ಮಸೂದೆಗೆ ಅನುಮೋದನೆ ಕೋರಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ‘ಅಮಾನವೀಯ, ದುಷ್ಟ ಪದ್ಧತಿಗಳು, ಮಾಟ– ಮಂತ್ರ ಮತ್ತು ವಾಮಾಚಾರ ಹೆಸರಿನಲ್ಲಿ ಶೋಷಣೆಗೆ ಒಳಗಾಗುವವರನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರ ಈ ಮಸೂದೆ ತಂದಿದೆ’ ಎಂದರು.
Comments