ಮೌಢ್ಯ ನಿಷೇಧ ಕಾಯ್ದೆ ಮಂಡಿಸಿದ್ದು ದೊಡ್ಡ ಸಾಧನೇನಾ : ಎಚ್ ಡಿಡಿ

ಮೌಡ್ಯ ನಿಷೇಧ ಕಾಯ್ದೆಯ ಬಗ್ಗೆ ಅಸಮಧಾನ ಹೊರಹಾಕಿರುವ ದೇವೇಗೌಡರು " ಮೌಢ್ಯ ನಿಷೇಧ ಕಾಯ್ದೆ ಮಂಡಿಸಿದ್ದು ದೊಡ್ಡ ಸಾಧನೇನಾ, ಇದರಿಂದ ಮತ್ತೊಂದು ರೀತಿಯ ದೌರ್ಜನ್ಯ ಪ್ರರಂಭವಾಗುತ್ತದೆ' ಎಂದಿದ್ದಾರೆ.
ಮೌಢ್ಯ ನಿಷೇಧ ಕಾಯ್ದೆ ಮಂಡಿಸುವುದೂ ಒಂದು ಸಾಧನೆಯೇ? ಇದರಿಂದ ಪೊಲೀಸರಿಗೆ ಮುಗ್ಧ ಜನರನ್ನು ಶೋಷಿಸಲು ಮತ್ತಷ್ಟು ಅವಕಾಶವಾಗುತ್ತದೆಯೇ ಹೊರತು ಬೇರೇನಿಲ್ಲ. ಅವರವರ ನಂಬಿಕೆ ಅವರಿಗೆ. ದೇವರ ಪೂಜೆ ಮಾಡುವುದು ಮೌಢ್ಯವೇ? ಎಂದು ಪ್ರಶ್ನಿಸುವ ಮೂಲಕ ದೇವೇಗೌಡರು, ಸರ್ಕಾರಕ್ಕೆ ಇದೆಲ್ಲಾ ಬೇಕಿತ್ತಾ ಎಂದು ವ್ಯಂಗ್ಯವಾಗಿ ನುಡಿದರು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಬಗ್ಗೆಯೂ ಮಾತನಾಡಿದ ಅವರು ಗುಜರಾತ್ ಚುನಾವಣೆ ನಂತರ ರಾಜ್ಯ-ದೇಶದಲ್ಲಿ ರಾಜಕೀಯ ಮಾರ್ಪಾಡಾಗಲಿದೆ ಎಂದರು. ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಹಿನ್ನಡೆಯಾಗುವುದೋ ಆ ಪಕ್ಷದವರು ಬೇರೆ ಪಕ್ಷಕ್ಕೆ ಹೋಗುವುದನ್ನು ನೋಡುತ್ತೀರಿ, ರಾಜ್ಯದಲ್ಲಿ ಮುಂದಿನ 2 ತಿಂಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ದೇವೇಗೌಡರು ಭವಿಷ್ಯ ನುಡಿದಿದ್ದಾರೆ.
Comments