ವಿಧಾನಮಂಡಲ ಅಧಿವೇಶನಕ್ಕೆ ಚಕ್ಕರ್, ಡ್ಯಾನ್ಸ್ ಗೆ ಹಾಜರ್

ಕಾಂಗ್ರೆಸ್ ಶಾಸಕ ಅಂಬರೀಶ್ ಅವರು ಅಧಿವೇಶನಕ್ಕೆ ಹಾಜರಾಗದೆ, ಸಿನಿಮಾವೊಂದರ ಆಡಿಯೋ ಬಿಡುಗಡೆ ಕಾರ್ಯಕ್ರದಲ್ಲಿ ಭಾಗಿಯಾಗಿ ವೇದಿಕೆಯಲ್ಲಿ ನಟಿ ಮಾಲಾ ಶ್ರೀ ಹಾಗೂ ಆಯಂಕರ್ ಅನು ಶ್ರೀ ಅವರೊಂದಿಗೆರೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋಗೆ ಆಕ್ಷೇಪಗಳು ವ್ಯಕ್ತವಾಗತೊಡಗಿವೆ.
ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ವೈದ್ಯರ ಮುಷ್ಕರ, ಸಾರ್ವಜನಿಕರ ನರಳಾಟ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಗಂಭೀರ ಚರ್ಚೆಗಳು ನಡೆಯುತ್ತಿದ್ದು, ಅಧಿವೇಶನಕ್ಕೆ ಹಾಜರಾಗದೆ, ಖಾಸಗಿ ಕಾರ್ಯಕ್ರಮವೊಂದಕ್ಕೆ ಹಾಜರಾಗಿ ಶಾಸಕ ಅಂಬರೀಶ್ ಅವರು ನೃತ್ಯ ಮಾಡಿರುವ ವಿಡಿಯೋವೊಂದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
Comments