ಶಾಸಕರು ಅಧಿವೇಶನಕ್ಕೆ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ

ಸಿದ್ದರಾಮಯ್ಯ, ಇದು ಬೆಳಗಾವಿಯಲ್ಲಿ ನಡೆಯುತ್ತಿರುವ ಕೊನೆಯ ಅಧಿವೇಶನವಾಗಿದ್ದು, ಏಕೆ ಭಾಗಿಯಾಗುತ್ತಿಲ್ಲ. ನಿಮಗೆ ಆಗಿರುವ ತೊಂದರೆಯಾದರೂ ಏನು, ಅದನ್ನಾದರೂ ಹೇಳಿ, ಪರಿಹರಿಸುತ್ತೇವೆ. ವಿಪ್ ಜಾರಿ ಮಾಡಿದರೂ ಕೂಡ ಭಾಗಿಯಾಗುತ್ತಿಲ್ಲ ಎಂದರೆ ಹೇಗೆ, ಇನ್ನು ಮುಂದಾದರೂ ಸಚಿವರು, ಶಾಸಕರು ಕಡ್ಡಾಯವಾಗಿ ಭಾಗಿಯಾಗಬೇಕು. ಶಾಸಕರು ಅಧಿವೇಶನಕ್ಕೆ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಜಾರ್ಜ್ ಪ್ರಕರಣದ ವಿಧೇಯಕಗಳನ್ನು ಬೆಂಬಲಿಸಿ ಎಂದು ಸೂಚನೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಶಾಸಕರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕಾಂಗ್ರೆಸ್ ಪರವಾದ ಒಲವು ರಾಜ್ಯದಲ್ಲಿದೆ. ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕಿದೆ. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸಬೇಕು. ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಚುನಾವಣಾ ಸಿದ್ಧತೆಗೆ ಮುಂದಾಗಲು ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಹಲವಾರು ಸೂಚನೆಗಳನ್ನು ನೀಡಿದರಲ್ಲದೆ ಬಿಜೆಪಿಯ ಪರಿವರ್ತನಾ ಯಾತ್ರೆ ಮೇಲೆ ಒಂದು ಕಣ್ಣಿಡಿ ಎಂದು ಸಲಹೆ ನೀಡಿದರು. ಹಲವು ಅನಗತ್ಯ ಗೊಂದಲಗಳನ್ನು ಬಿಜೆಪಿ ಸೃಷ್ಟಿಸುತ್ತದೆ. ಈ ಬಗ್ಗೆ ಎಚ್ಚರದಿಂದಿರಬೇಕೆಂದು ಸಲಹೆ ಮಾಡಿದರು. ಸದಾಶಿವ ಆಯೋಗದ ವರದಿ, ಜಾರ್ಜ್ ಪ್ರಕರಣದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಶಾಸಕರಿಗೆ ಸಲಹೆ ನೀಡಿದರು.
Comments