ಎಚ್ ಡಿ ದೇವೇಗೌಡರಿಗೆ ಕುಟುಂಬ ಸಂಕಷ್ಟ

ದೇವೇಗೌಡರು ಹಾಗೂ ಎಚ್ ಡಿ ಕುಮಾರ ಸ್ವಾಮಿ ಯವರಿಗೆ ಟಿಕೇಟ್ ಹಂಚಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಅಲ್ಲದೆ ಚುನಾವಣೆ ಹತ್ತಿರ ಬಂದಂತೆ ದೇವೇಗೌಡರಿಗೆ ತಮ್ಮ ಕುಟುಂಬ ನಿಭಾಯಿಸೋದು ಕಷ್ಟವಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ದೇವೇಗೌಡರಿಗೆ ಕುಟುಂಬ ನಿಭಾಯಿಸೋದೆ ತಲೆನೋವಾಗಿದೆ. ಅನಿತಾ ಕುಮಾರಸ್ವಾಮಿ ,ಭವಾನಿ ರೇವಣ್ಣ , ಪ್ರಜ್ವಲ್ ರೇವಣ್ಣ , ಅನಿತಾಗೆ ಟಿಕೆಟ್ ಕೊಟ್ಟು ಭವಾನಿ ರೇವಣ್ಣಗೆ ಕೊಡದೆ ಇದ್ದರೆ ಕಷ್ಟ,ಭಾವಿನಿಗೆ ಕೊಟ್ಟು ಅನಿತಾಗೆ ಕೊಡದಿದ್ದರೂ ಕಷ್ಟ ಟಿಕೇಟ್ ಕೊಟ್ಟರೆ ಕುಟುಂಬ ರಾಜಕಾರಣದ ಅಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ.ಕೊಡದೆ ಇದ್ದರೆ ಕುಟುಂಬದಲ್ಲಿ ಬಂಡಾಯ ಭೀತಿ ಎದುರಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
Comments