ದಲಿತನ ಮೇಲೆ ಬಿಜಿಪಿ ಮುಖಂಡನ ಅಟ್ಟಹಾಸ
ತೆಲಂಗಾಣದ ಬಿಜೆಪಿ ಜಿಲ್ಲಾ ಮಾಜಿ ಕಾರ್ಯದರ್ಶಿ ಎಂ ಭರತ್ ರೆಡ್ಡಿ ಅವರು ಎರ್ರಾಕುಂಟಾ ಎಂಬ ಕೊಳದಲ್ಲಿನ ಜಲ್ಲಿ ಕಲ್ಲುಗಳನ್ನು ಸರ್ಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಸಾಗಿಸುವುದನ್ನು ಕೊಂಡ್ರಾ ಲಕ್ಷ್ಮಣ್ ಮತ್ತು ರಾಜೇಶ್ವರ್ ಪ್ರಶ್ನಿಸಿದ್ದಾರೆ. ಆದ ಕಾರಣ ಕೆರೆಯಲ್ಲಿ ಮುಳುಗಿ ಏಳುವ ಶಿಕ್ಷೆ ವಿಧಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇಬ್ಬರು ದಲಿತರನ್ನು ಹಿಂಸಿಸಿದ ಬಿಜೆಪಿಯ ಜಿಲ್ಲಾ ಮಾಜಿ ಕಾರ್ಯದರ್ಶಿ ಎಂ ಭರತ್ ರೆಡ್ಡಿ ವಿರುದ್ಧ ಸ್ಥಳೀಯ ದಲಿತ ನಾಯಕ ಮಣಿಕೊಲ್ಲಾ ಗಂಗಾಧರ್ ಅವರು ದೂರು ದಾಖಲಿಸಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭರತ್ ತಲೆಮರೆಸಿಕೊಂಡಿದ್ದು, ಶೀಘ್ರವೇ ಅವರನ್ನು ಪತ್ತೆ ಹಚ್ಚಲಾಗುವುದು ಎಂದು ನಿಜಾಮಾಬಾದಿನ ಸರ್ಕಲ್ ಇನ್ಸ್ಪೆಕ್ಟರ್ ಎನ್ ಭುಚ್ಚಯ್ಯಾ ಹೇಳಿದ್ದಾರೆ.
Comments