ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿಯ ಮಧ್ಯಸ್ಥಿಕೆಗೆ ಸಿಎಂ ಮನವಿ

ಮಹದಾಯಿ ವಿವಾದ ಸಂಬಂಧ ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ನಾನು ಈಗಾಗಲೇ ಮನವಿ ಮಾಡಿದ್ದೇನೆ ಎಂದು ಸಿಎಂ ತಿಳಿಸಿದರು. ಗೋವಾ, ಮಹಾರಾಷ್ಟ್ರ ಸರ್ಕಾರದ ಜತೆ ಮಾತುಕತೆ ನಡೆಸಲು ಈಗಾಗಲೇ ಮೂರು ಬಾರಿ ಪತ್ರ ಬರೆದಿದ್ದೇನೆ. ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಅವರು ಕರೆಯದೆಯೇ ನಾನು ಹೋಗಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ನಾನು ಹೋಗಿ ಬಾಗಿಲಲ್ಲಿ ನಿಂತು ಬರಲೇ ಎಂದು ರೇಗಿದರು. ಪ್ರಧಾನಿಯವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬಹುದು. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಅದನ್ನು ಅವರು ಮಾಡಲಿ ಎಂದು ತಿಳಿಸಿದರು. ಬಿಎಸ್‍ವೈ ಅವರು ತಮ್ಮ ಸರ್ಕಾರದ ಮೇಲೆ ಆರೋಪಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ಅವರ ಮೇಲಿನ ಕೇಸ್‍ಗಳಿಂದ ಹೊರಬರಲಿ ಎಂದರು. ಸಚಿವ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ಪಕ್ಷದವರ ಮುಖಂಡರ ಮೇಲೆ ಸಾಕಷ್ಟು ದೂರುಗಳಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರು, ನಮ್ಮಲ್ಲಿರುವ ಹಲವು ಮುಖಂಡರು ಸೇರಿದಂತೆ 24 ಮಂತ್ರಿಗಳ ಮೇಲೆ ಎಫ್‍ಐಆರ್‍ಗಳು ದಾಖಲಾಗಿವೆ. ಮೊದಲು ಅವರ ರಾಜೀನಾಮೆ ಕೊಡಿಸಿ, ನಂತರ ಜಾರ್ಜ್ ರಾಜೀನಾಮೆ ಕೇಳಲಿ ಎಂದು ಹೇಳಿದರು.
Comments